Header Ads
Header Ads
Breaking News

ಐರಾವತ ಯೋಜನೆಯಡಿ ಫಲಾನುಭವಿಗಳಿಗೆ ಟ್ಯಾಕ್ಸಿ ವಾಹನ ವಿತರಣೆ

ಕರ್ನಾಟಕ ಸರ್ಕಾರ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ,ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ವತಿಯಿಂದ ಐರಾವತ ಯೋಜನೆಯಡಿ 13 ಪಲಾನುಭವಿಗಳಿಗೆ ಟ್ಯಾಕ್ಸಿ ವಾಹನಗಳನ್ನು ವಿತರಿಸಲಾಯಿತು.

ಕರ್ನಾಟಕ ಸರ್ಕಾರದಿಂದ ಐರಾವತ ಯೋಜನೆಯಡಿ ಉಚಿತ ಬ್ಯಾಂಕ್ ಸಬ್ಸಿಡಿಯ ಮೂಲಕ ಕೊಡಮಾಡಲಾಗುವ ಟ್ಯಾಕ್ಸಿ ವಾಹನಗಳನ್ನು ಮಂಗಳೂರಿನ ಸಕ್ಯೂಟ್‍ಹೌಸ್ ಆವರಣದಲ್ಲಿ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಪಲಾನುಭವಿಗಳಿಗೆ ಹಸ್ತಾಂತರಿಸಿದರು.ಬಳಿಕ ಮಾತನಾಡಿ ಕರ್ನಾಟಕ ಸರ್ಕಾರದಿಂದ ಈ ಯೋಜನೆಯಡಿ ನಮ್ಮ ಜಿಲ್ಲೆಯಲ್ಲಿ ಸ್ವಾಲವಂಬನೆಯ ಜೀವನ ಸಾಗಿಸಲು 24 ಸಹೋದರರಿಗೆ ಟ್ಯಾಕ್ಸಿ ವಾಹನ ಸಿಗಲಿದೆ, ಅದರಲ್ಲಿ ಇಂದು 13 ಜನರಿಗೆ ಟ್ಯಾಕ್ಸಿ ವಾಹನಗಳನ್ನು ನೀಡುತ್ತಿದ್ದೇವೆ, ಇವರ ಇನ್ನು ಮುಂದೆ ಸ್ವಂತ ದುಡಿಮೆಯ ಮೂಲಕ ನೆಮ್ಮದಿಯ ಜೀವನ ಮಾಡಿಕೊಂಡು, ಭವಿಷ್ಯದಲ್ಲಿ ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ಮೂಲಕ ದೇಶದ ಉತ್ತಮ ಪ್ರಜೆಯನ್ನಾಗಿ ನಿರ್ಮಾಮಾಡಬೇಕು, ಎಂದು ಹೇಳಿದರು.

Related posts

Leave a Reply

Your email address will not be published. Required fields are marked *