Header Ads
Header Ads
Breaking News

’ಒಟ್ರಾಸಿ ಮಂಡೆಬೆಚ್ಚ’ ಎಂಬ ತುಳು ನಾಟಕದ ಮುಹೂರ್ತ ಕಾರ್ಯಕ್ರಮ

ಅಮ್ಮ ಕಲಾವಿದರು ಬಹರೈನ್ ಇವರು ಸಾದರ ಪಡಿಸುವ, ಮೋಹನದಾಸ ರೈ ಎರುಂಬು ಇವರ ಸಾರಥ್ಯದಲ್ಲಿ ದಿನಕರ ಭಂಡಾರಿ ಕಣಂಜಾರು ಇವರ ರಚನೆಯ ಒಟ್ರಾಸಿ ಮಂಡೆಬೆಚ್ಚ ಎಂಬ ತುಳು ಸಾಮಾಜಿಕ ಹಾಸ್ಯಮಯ ನಾಟಕದ ಮುಹೂರ್ತ ಕಾಯ್ರಕ್ರಮವು ಬಹರೈನ್ ಕನ್ನಡ ತುಳು ಕಲಾ ಪೋಷಕರ ಸಮ್ಮುಖದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕನ್ನಡ ಸಂಘ ಬಹರೈನ್ ಇದರ ಅಧ್ಯಕ್ಷರಾದ ಶ್ರೀ ಪ್ರದೀಪ್ ಶೆಟ್ಟಿ , ಉಪಾಧ್ಯಕ್ಷರಾದ ಶ್ರೀ ಡಿ.ರಮೇಶ್ , ಕಲಾಪೋಷಕರಾದ ಶ್ರೀ ಅಮರನಾಥ ರೈ ,ಕಲಾಪೋಷಕರಾದ ಶ್ರೀ ರಮೇಶ್ ಮಂಜೇಶ್ವರ ,ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಆಸ್ಟಿನ್ ಸಂತೋಷ್ , ಪಟ್ಲ ಫೌಂಡೇಶನ್ ಬಹರೈನ್ ಸೌದಿ ಅರೇಬಿಯಾ ಘಟಕದ ಅಧ್ಯಕ್ಷರಾದ ಶ್ರೀರಾಜೇಶ್ ಶೆಟ್ಟಿ , ಪಟ್ಲ ಫೌಂಡೇಶನ್ ಬಹರೈನ್ ಸೌದಿ ಅರೇಬಿಯಾ ಘಟಕದ ಗೌರವ ಅಧ್ಯಕ್ಷರಾದ ಶ್ರೀ ಸುಭಾಷ್ ಚಂದ್ರ ,ರೋಯಲ್ ತುಳು ಕೂಟದ ಅಧ್ಯಕ್ಷರಾದ ಶ್ರೀ ಕರ್ಮಾರ್ ನಾಗೇಶ್ ಶೆಟ್ಟಿ , ಬಹರೈನ್ ಬಿಲ್ಲವಾಸ್ ಪದಾಧಿಕಾರಿಯಾದ ಪುರುಷೋತ್ತಮ ಪೂಜಾರಿ ,ವಿಶ್ವಕರ್ಮ ಸೇವಾ ಬಳಗ ಬಹರೈನ್ ಇದರ ಅಧ್ಯಕ್ಷರಾದ ಶ್ರೀ ಜಗದೀಶ್ ಆಚಾರ್ಯ , ಬಹರೈನ್ ಕುಲಾಲ್ಸ್ ಇದರ ಅಧ್ಯಕ್ಷರಾದ ಶ್ರೀ ಗಣೇಶ್ ಕುಲಾಲ್ ಮಾಣಿಲ ಇವರುಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀ ಶೇಖರ್ ಶೆಟ್ಟಿ , ಶ್ರೀ ಶಿವಕುಮಾರ್ ಶೆಟ್ಟಿ , ಶ್ರೀ ಕಮಲಾಕ್ಷ ಅಮೀನ್ , ಶ್ರೀಮತಿ ಲೋಲಾಕ್ಷಿ ರಾಜಾರಾಮ್ ಹಾಗೂ ಅಮ್ಮ ಕಲಾವಿದರು ಬಹರೈನ್ ಇದರ ಹಿತೈಷಿಗಳು ಉಪಸ್ಥಿತರಿದ್ದರು. ಮೋಹನದಾಸ ರೈ ಪ್ರಾಸ್ತಾವಿಕ ಭಾಷಣ ಹಾಗೂ ಪಾತ್ರ ಪರಿಚಯ ನಡೆಸಿ ಕೊಟ್ಟರು.
ಲಕ್ಷೀಶ್ ಕಡಮಣ್ಣಾಯ ಕುಂಬ್ಳೆ ಇವರು ಮುಹೂರ್ತ ಪೂಜೆ ನೆರವೇರಿಸಿದರು. ದೂಮಣ್ಣ ರೈ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.ಈ ನಾಟಕವು ಡಿ.೬ರಂದು ಇಂಡಿಯನ್ ಕ್ಲಬ್ ಮನಮಾದಲ್ಲಿ ಪ್ರದರ್ಶನಗೊಳ್ಳಲಿದ್ದು, ವಿಶೇಷವಾಗಿ ಕರಾವಳಿಯ ಸುಂದರ್ ರೈ ಮಂದಾರ ಹಾಗೂ ಹಾಸ್ಯ ರತ್ನ ರವಿ ರಾಮಕುಂಜಾ ನಡಿಸುತ್ತಿದ್ದು ಹಾಸ್ಯರ ರಸದೌತಣವನ್ನು ಉಣಬಡಿಸಲಿದ್ದಾರೆ. ನಾಟಕಕ್ಕೆ ಹಿನ್ನಲೆ ಸಂಗೀತದಲ್ಲಿ ಯಕ್ಷಿತ್ ಶೆಟ್ಟಿ ಹಾಗೂ ದಿವ್ಯರಾಜ ರೈ ಸಹಕರಿಸಲಿದ್ದಾರೆ.

Related posts

Leave a Reply

Your email address will not be published. Required fields are marked *