Header Ads
Header Ads
Breaking News

ಓಶಿಯನ್ ಪರ್ಲ್‌ನಲ್ಲಿ ಬಲೂಚಿಸ್ತಾನ್ ಫುಡ್ ಫೆಸ್ಟಿವಲ್

ಮಂಗಳೂರಿನ ಫುಡ್ ಪ್ರಿಯರಿಗೊಂದು ಸಿಹಿ ಸುದ್ದಿ.. ನಗರದ ಓಷಿಯನ್ ಪರ್ಲ್‌ನ ಕೋರಲ್ ಫೈನ್ ಡೈನ್ ರೆಸ್ಟೋರೆಂಟ್‌ನಲ್ಲಿ ಬಲೂಚಿಸ್ತಾನ್ ಫುಡ್ ಫೆಸ್ಟಿವಲ್ ಆರಂಭಗೊಂಡಿದ್ದು, ಜುಲೈ 25ರವರೆಗೆ ನಡೆಯಲಿದೆ. ವೆರೈಟಿ ವೆರೈಟಿಯ ಬಲೂಚಿಸ್ತಾನ್ ಫುಡ್ ಲಭ್ಯವಿದ್ದು ಗ್ರಾಹಕರನ್ನು ಕೈ ಬೀಸಿ ಕರಿತಾ ಇದೆ.

ಹೌದು. ಮಂಗಳೂರು ನಗರದಲ್ಲೇ ವೆರೈಟಿ ವೆರೈಟಿ ಫುಡ್ ಮೂಲಕ ಗಮನ ಸೆಳೆದ ಓಶಿಯನ್ ಪರ್ಲ್‌ನ ಕೋರಲ್ ಫೈನ್ ಡೈನ್ ರೆಸ್ಟೋರೆಂಟ್ ಗ್ರಾಹಕರನ್ನು ಕೈಬೀಸಿ ಕರಿತಾ ಇದೆ. ಇದೀಗ ಬಲೂಚಿಸ್ತಾನ್ ಆಹಾರ ಉತ್ಸವ ಆರಂಭಗೊಂಡಿದ್ದು ಜುಲೈ 25ರವರೆಗೆ ಮುಂದುವರಿಯಲಿದೆ ಎಂದು ಓಷಿಯನ್ ಪರ್ಲ್‌ನ ಫುಡ್, ಬೆವರೇಜ್ ಮ್ಯಾನೇಜರ್ ಮಥನ್ ಸೆಲ್ವರಾಜ್ ಮಾಹಿತಿ ನೀಡಿದ್ರು.
 
ಮಾಂಸಾಹಾರಿ ಖಾದ್ಯಗಳಲ್ಲಿ ಝಫ್ರನಿ ಮಾಹಿ, ಮಿರ್ಚಿ ಕಿ ಮಚಲಿ, ಇರಾನಿ ಸಿಗಡಿ ಮುರ್ಗ್ ಬಲೂಚಿ ಕಬಾಬ್, ಸಾಜಿ ಚಿಕನ್, ಸಿಕಂದರಿ ರಾನ್, ಬರ್ರ್‍ಆ ಕಬಾಬ್, ಗೋಶ್ತ್ ಗಲ್ಲೌಟಿ ಕಬಾಬ್, ಕೋಫ್ತೆ ಕಬಾಬ್, ಜಿಂಗಾ ಕಾ ಸಲನ್, ಕಂದಹಾರಿ ಲ್ಯಾಂಬ್ ಮತ್ತಿತರ ವೈವಿಧ್ಯಮಯ ಖಾದ್ಯಗಳು ಮಾಂಸಾಹಾರಿ ವಿಭಾಗಗಳಲ್ಲಿ ಲಭ್ಯವಿದೆ ಎಂದು ಶೆಫ್ ಅರುಣ್ ಗಿರಿ ತಿಳಿಸಿದ್ರು.

ಸಸ್ಯಾಹಾರಿ ವಿಭಾಗದಲ್ಲಿ ರಾಜ್‌ಮಾ ಕಿ ಗಲೌಟಿ, ಖಮ್ ಖತೈ, ಭರ್ವಾನ್ ಧಿಂಗ್ರಿ, ಆಲೂ ಬುಕಾರಾ ಕೋಫ್ತ, ಮಶ್ ಖಲಿಯಾ, ಗುಂಚಾ – ವಾ – ಖೀಮಾ, ದಮ್ ಕಿ ದಾಲ್ ಮತ್ತಿತರ ಸ್ವಾದಿಷ್ಟಕರ ಹಾಗೂ ಆರೋಗ್ಯಕರ ಖಾದ್ಯಗಳು ಆಹಾರ ಉತ್ಸವದಲ್ಲಿದೆ.
ಇದರ ಜತೆಯಲ್ಲೇ ಸೂಪ್, ವಿವಿಧ ರೀತಿಯ ಬಿರಿಯಾನಿಗಳು , ರೋಟಿಗಳ ಜೊತೆ ಸೇಮಿಯಾ ಜರ್ದಾ, ಕೇಸರಿ ಫಿರ್ನಿ, ಶಹಿ ತುಕುಡಾ, ಕುಲ್ಫಿ ಫಾಲೂದಾ ಮತ್ತಿತರ ಡೆಸರ್ಟ್‌ಗಳು ಕೂಡ ಲಭ್ಯವಿದೆ. ಆಹಾರ ಪ್ರಿಯರು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹಾಗೂ ರಾತ್ರಿ 7ರಿಂದ 11 ಗಂಟೆಯವರೆಗೆ ವೈವಿಧ್ಯಮಯ ತಿಂಡಿ ತಿನಿಸುಗಳ ರುಚಿಯನ್ನು ಸವಿಯಬಹುದಾಗಿದೆ.
ಒಟ್ಟಿನಲ್ಲಿ ಮಂಗಳೂರು ಸೇರಿದಂತೆ ಜಿಲ್ಲೆಯ ಆಹಾರ ಪ್ರಿಯರಿಗೆ ದೇಶ ವಿದೇಶಗಳ ವಿಶೇಷ ಅಡುಗೆಗಳನ್ನು ಉಣಬಡಿಸುವುದೇ ಈ ಆಹಾರ ಮೇಳದ ಉದ್ದೇಶ. ಪ್ರತಿ ತಿಂಗಳು, ಎರಡು ತಿಂಗಳಿಗೊಮ್ಮೆ ವಿಭಿನ್ನ ಆಹಾರ ಉತ್ಸವವನ್ನು ಆಯೋಜಿಸಲಾಗುತ್ತದೆ. ಇದೀಗ ಬಲೂಚಿಸ್ತಾನದ ಸ್ವಾದಿಷ್ಟಕರ ಖಾದ್ಯಗಳ ಆಹಾರ ಉತ್ಸವ ನಡೆಯುತ್ತಿದೆ. ಬಿರಿಯಾನಿ, ಕಬಾಬ್, ಸೂಪ್ ಸೇರಿದಂತೆ ವೈವಿಧ್ಯಮಯ ಖಾದ್ಯಗಳನ್ನು ಆಹಾರ ಪ್ರಿಯರು ಸವಿಯಬಹುದಾಗಿದೆ.

Related posts

Leave a Reply

Your email address will not be published. Required fields are marked *