Header Ads
Breaking News

ಕಂಪೌಂಡ್ ಸಹಿತ ಧರೆ ಕುಸಿತ ಮನೆ, ಶೌಚಾಲಯ, ಸ್ನಾನಗೃಹ ಸಂಪೂರ್ಣ ಹಾನಿ

ಕಂಪೌಂಡ್ ಸಹಿತ ಧರೆ ಕುಸಿದು ಮನೆ, ಶೌಚಾಲಯ, ಸ್ನಾನಗೃಹ ಸಂಪೂರ್ಣ ಹಾನಿ ಉಂಟಾದ ಘಟನೆ ಕಾಣಿಯೂರು ಸಮೀಪ ಅಬೀರ ಹೊಸೊಕ್ಲು ಎಂಬಲ್ಲಿ ನಡೆದಿದೆ. ಮಂಗಳೂರಿನಲ್ಲಿ ಮತ್ತು ಪುತ್ತೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂ ಕುಸಿತದ ಮಾದರಿಯಲ್ಲಿಯೇ ಮಹಾ ದುರಂತವೊಂದು ಬೆಳಂದೂರು ಗ್ರಾಮದ ಅಬೀರ ಹೊಸೊಕ್ಲು ಎಂಬಲ್ಲಿ ನಡೆದಿದೆ. ಮನೆಯ ಮೇಲೆ ಬಿದ್ದಿರುವ ಮಣ್ಣನ್ನು ಊರಿನವರು ಸೇರಿ ಸರಿಸಿದ್ದು ಬಿಟ್ಟರೆ ಸಮಸ್ಯೆ ಮಾಡಿದ ಜಾಗದವರು ಸಹಾಯಕ್ಕೆ ಮುಂದೆ ಬಂದಿಲ್ಲ. ಸುಮಾರು 2 ಲಕ್ಷದಷ್ಟು ನಷ್ಟ ಉಂಟಾಗಿದೆ. ತೀರಾ ಬಡವನಾದ ನನಗೆ ದುರಸ್ಥಿ ಮಾಡಲು ಸಾಧ್ಯವಿಲ್ಲ ಎಂದು ಮನೆಯವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Related posts

Leave a Reply

Your email address will not be published. Required fields are marked *