Header Ads
Header Ads
Header Ads
Header Ads
Header Ads
Header Ads
Breaking News

ಕಟೀಲು ದೇವಳಕ್ಕೆ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಭೇಟಿ

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಖ್ಯಾತ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಭೇಟಿ ನೀಡಿದರು, ದೇವಳದ ವತಿಯಿಂದ ಶಿಲ್ಪಾ ಶೆಟ್ಟಿ ಅವರನ್ನು ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷವಸ್ತ್ರ ನೀಡಿ ಗೌರವಿದ್ರು. ಮುಂದಿನ ಜನವರಿಯಲ್ಲಿ ದೇವಳದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಅಮಂತ್ರಣ ಪತ್ರಿಕೆಯನ್ನು ನೀಡಲಾಯಿತು.12 ವರ್ಷಗಳ ಹಿಂದೆ ದೇವಳದಲ್ಲಿ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ಮುಂಬೈ ಸಮಿತಿಯವರು ನೀಡಿದ್ದ ಚಿನ್ನದ ಕೊಡಪಾನದಲ್ಲಿ ಶಿಲ್ಪ ಶೆಟ್ಟಿಯವರ ಹೆಸರಿದ್ದು ಅದನ್ನು ಅವರಿಗೆ ತೋರಿಸಲಾಯಿತು. ಇದನ್ನು ನೋಡಿ ಶಿಲ್ಪಾ ಅವರು ಸಂತೋಷಪಟ್ಟು ಸಾಧ್ಯವಾದರೆ ಬ್ರಹ್ಮಕಲಶೋತ್ಸವಕ್ಕೂ ಬರುವುದಾಗಿ ತಿಳಿಸಿದರು. ಈ ಸಂದರ್ಭ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಲಕ್ಷೀನಾರಾಯಣ ಆಸ್ರಣ್ಣ, ಸದಾನಂದ ಆಸ್ರಣ್ಣ, ಡಾ.ಸಿಂಧು, ನಿರೂಪಕ ನಿತೇಶ್ ಶೆಟ್ಟಿ ಎಕ್ಕಾರು ಮತ್ತಿತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *