Header Ads
Header Ads
Breaking News

ಕಟೀಲು ಮೇಳಗಳಲ್ಲಿ ಅವ್ಯವಹಾರ ನಡೆದಿಲ್ಲ: ಕಟೀಲು ಕ್ಷೇತ್ರದ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ

ಕಳೆದ ಕೆಲ ದಿನಗಳಿಂದ ಕೆಲ ಮಾಧ್ಯಮಗಳಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮೇಳಗಳ ಬಗ್ಗೆ ಅಪಪ್ರಚಾರದ ಸುದ್ದಿಗಳು ಬರುತ್ತಿದ್ದು ನಾವು ಕಾನೂನು ಮೀರಿ ನಡೆದಿಲ್ಲ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ತೇಸರರಾದ ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ ಹೇಳಿದ್ದಾರೆ.ಅವರು ಕಟೀಲು ದೇಗುಲದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಟೀಲು ದೇಗುಲದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾಹಿತಿ ನೀಡಿ ಕಟೀಲು ಮೇಳಗಳಿಂದ ಕಳೆದ ತಿರುಗಾಟದಲ್ಲಿ ದೇವಳಕ್ಕೆ 1ಕೋಟಿ4ಲಕ್ಷ ರೂ. ಆದಾಯ ಬಂದಿದೆ. ಮೇಳದ ವೀಳ್ಯ ಹಾಗೂ ಇತರ ಖರ್ಚುಗಳನ್ನು ದೇಗುಲದ ಆಡಳಿತ ಮಂಡಳಿಯೇ ನಿರ್ಧರಿಸುತ್ತದೆಯೇ ಹೊರತು ಮೇಳದ ಸಂಚಾಲಕರು ಅಥವಾ ಯಕ್ಷಧರ್ಮಬೋಧಿನೀ ಟ್ರಸ್ಟ್ ನಿರ್ಧರಿಸುವುದಲ್ಲ. ದೇಗುಲಕ್ಕೆ ಪರಿಶೀಲನೆಗೆ ಬಂದ ಅಧಿಕಾರಿಗಳಾಗಲೀ ಆಯುಕ್ತರಾಗಲೀ ಮೇಳಗಳ ವ್ಯವಸ್ಥೆಯಲ್ಲಿ ಯಾವುದೇ ಅವ್ಯವಹಾರ ನಡೆದಿರುವುದು ಕಂಡುಬಂದಿಲ್ಲ. ಮೇಳಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಬಹುದು. ಸೂಕ್ತ ಬದಲಾವಣೆಗಳನ್ನು ಮಾಡಬಹುದು ಎಂದು ವರದಿ ನೀಡಿದ್ದಾರೆ. ಹಾಗಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ಮೇಳಗಳ ಏಲಂಗೆ ಕ್ಷಣಗಣನೆ, ಮುಟ್ಟುಗೋಲು ಎಂಬಂತಹ ಸುದ್ದಿಗಳು ಸತ್ಯಕ್ಕೆ ದೂರವಾಗಿದೆ.ಈ ಸಂದರ್ಭ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಆಸ್ರಣ್ಣ, ಮೇಳಗಳ ಸಂಚಾಲಕರಾದ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ ಆಚಾರ್‍ಯ, ರವಿ ಆಚಾರ್‍ಯ, ಶಿವಾಜಿ ಶೆಟ್ಟಿ, ರಾಮಣ್ಣ ಶೆಟ್ಟಿ, ಭಜುಂಗ ಶೆಟ್ಟಿ, ಮತ್ತಿತರರಿದ್ದರು.

Related posts

Leave a Reply