Header Ads
Breaking News

ಕಡಲ ತೀರದ ಗಡಿ ಉಲ್ಲಂಘಿಸಿದ ಆರೋಪ : ಇಂಡೋನೇಶಿಯಾ ನೌಕಾ ಸೇನೆ ವಶದಲ್ಲಿರುವ ಭಾರತೀಯರು

ಮಂಜೇಶ್ವರ : ಕಡಲ ತೀರದ ಗಡಿಯನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿ ಉಪ್ಪಳ, ಕುಂಬಳೆ, ಕಾಸರಗೋಡು ನಿವಾಸಿಗಳ ಸಹಿತ 23 ಭಾರತೀಯರನ್ನೊಳಗೊಂಡ ಹಡಗೊಂದನ್ನು ಇಂಡೋನೇಷ್ಯಾ ನೌಕಾ ಸೇನೆ ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ನೌಕರರ ಪೈಕಿ 10 ಮಂದಿಯನ್ನು ಬಿಡುಗಡೆಗೊಳಿಸಿದ್ದಾರೆ.

ಉಪ್ಪಳ ಪಾರಕಟ್ಟ ನಿವಾಸಿ ಪಿಕೆ ಮೊಹಮ್ಮದ್ ಎಂಬವರ ಪುತ್ರ ಪಿ.ಕೆ ಮೂಸಾ ಕುಂಞ, ಪಾಲಕ್ಕಾಡ್ ಜಿಲ್ಲೆಯ ವೆರಿಂಜಿರ ನಿವಾಸಿ ವಿಪಿನ್ ರಾಜ್ ಎಂಬಿವರನ್ನೊಳಗೊಂಡ ಹತ್ತು ಮಂದಿ ನಾಡಿಗೆ ಸುರಕ್ಷಿತವಾಗಿ ತಲುಪಿದ್ದಾರೆ.ಕೇರಳದವರು ಎರಡು ಮಂದಿಯಾದರೆ ಉಳಿದವರು ಉತ್ತರ ಭಾರತದವರಾಗಿದ್ದರು.ಇಂದು ಸರಿಯಾಗಬಹುದು, ನಾಳೆ ಸರಿಯಾಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದ ನೌಕರರು ಕಳೆದ ಆರು ತಿಂಗಳಿನಿಂದ ಬಂಧಿಯಾಗಿರುವ ಭಾರತೀಯರ ದುರಂತ ಕತೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗಿತ್ತು ಅಧಿಕಾರಿಗಳ ಹಾಗೂ ಮಂತ್ರಿಗಳ ಕಣ್ತೆರೆಯುವಂತೆ ಮಾಡಿತ್ತು. ಈ ಕಳೆದ ಫೆಬ್ರವರಿ 8 ಕ್ಕೆ ಸಿಂಗಾಪುರಕ್ಕೆ ಸಮೀಪದಲ್ಲಿ ಇಂಡೋನೇಷ್ಯಾ ನೌಕಾ ಸೇನೆ ಹಡಗನ್ನು ವಶಕ್ಕೆ ತೆಗೆದಿದೆ.

ಎರಡು ವರ್ಷಕ್ಕೊಮ್ಮೆ ನಡೆಸುವ ಹಡಗಿನ ದರಸ್ಥಿ ಕಾರ್ಯ ಮುಗಿದ ಬಳಿಕ ಸಿಂಗಾಪುರ ಬಂದರಿನಲ್ಲಿ ಸರಕುಗಳನ್ನು ಹೇರುತ್ತಿರುವ ಮಧ್ಯೆ ಭಾರತೀಯರಿರುವ ಎಂಟಿಎಸ್‍ಜಿ ವೇಗಸ್ ಆಂಗೋ ಈಸ್ಟನ್ ಶಿಪ್ಪಿಂಗ್ ಕಂಪನಿಯ ಹಡಗನ್ನು ಇಂಡೋನೇಷ್ಯಾ ನೌಕಾ ಸೇನೆ ವಶಕ್ಕೆ ತೆಗೆದಿತ್ತು. ಉಪ್ಪಳ ನಯಾಬಜಾರ್ ಪಾರಕಟ್ಟ ನಿವಾಸಿ ಮೂಸ ಕುಂಞ, ಮೊಗ್ರಾಲ್ ಕೊಪ್ಪಳದ ಕಲಂದರ್, ಕಾಸರಗೋಡು ನಿವಾಸಿ ಅನೂಪ್, ಪಾಲಕ್ಕಾಡ್ ಜಿಲ್ಲೆಯ ಪೆರಿಂಜುರ ನಿವಾಸಿ ವಿಪಿನ್ ರಾಜ್ ಸೇರಿದಂತೆ ಗೋವಾ, ಉತ್ತರ ಪ್ರದೇಶ, ಮದ್ಯ ಪ್ರದೇಶ, ದೆಹಲಿ ರಾಜ್ಯಗಳಲ್ಲಿರುವ ನಿವಾಸಿಗಳ ಸಹಿತ ಸುಮಾರು 23 ಮಂದಿ ಬಂಧಿಯಾಗಿದ್ದರು.

ವರ್ಕ್ ಪರ್ಮಿಟ್ ಹಾಗೂ ಮೆಡಿಕಲ್ ಕಾಲಾವಧಿ ಎರಡು ತಿಂಗಳು ಬಾಕಿ ಉಳಿದಿರುವ 12 ಮಂದಿ ಇನ್ನೂ ಅಲ್ಲಿ ಉಳಿದಿದ್ದಾರೆ. ಎರ್ ತ್ಳೀಣೋಳಗೆ ಅವರನ್ನೂ ಕಳುಹಿಸುವುದಾಗಿ ಕಂಪನಿ ವಾಗ್ದಾನ ನೀಡಿರುವುದಾಗಿ ಊರಿಗೆ ತಲುಪಿದ ಮೂಸ ಕುಂಞÂ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲೆಯವರಾದ ಕುಂಬಳೆ ಕೊಪ್ಪಳ ನಿವಾಸಿ ಕಲಂದರ್, ಕಾಸರಗೋಡು ನಿವಾಸಿ ಅನುತೇಜ್ ಸೇರಿದಂತೆ 12 ಮಂದಿ ಇನ್ನೂ ಅಲ್ಲೇ ಉಳಿದಿದ್ದಾರೆ.

Related posts

Leave a Reply

Your email address will not be published. Required fields are marked *