Header Ads
Breaking News

ಕಣಚೂರು ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ ಅಲೋಹಾ-2020

ನಾಟೆಕಲ್‍ನ ಕಣಚೂರು ಕಾಲೇಜ್ ಆಫ್ ನಸಿರ್ಂಗ್ ಸೈನ್ಸ್ ಇದರ ಅಂತಿಮ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಬೀಳ್ಕೊಡುಗೆ ಸಮಾರಂಭ ಅಲೋಹಾ-2020 ಕಣಚೂರು ಆಸ್ಪತ್ರೆ ಸಭಾಂಗಣದಲ್ಲಿ ನಡೆಯಿತು.

ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಯು.ಕೆ ಕಣಚೂರು ಮೋನು ಅಲೋಹಾ-2020 ಕಾರ್ಯಕ್ರಮವನ್ನು ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಹೆತ್ತವರು ಮಕ್ಕಳಿಗೆ ಒಂದೇ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಆರಂಭಗೊಂಡ ಕಣಚೂರು ಶಿಕ್ಷಣ ಸಂಸ್ಥೆ ಇದೀಗ ವೈದ್ಯಕೀಯ ಶಿಕ್ಷಣಕ್ಕೆ ಕಾಲಿಟ್ಟು ಐದು ವರ್ಷಗಳನ್ನು ಕಳೆದು ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಣಚೂರು ಇಸ್ಲಾಮಿಕ್ ಎಜುಕೇಷನ್ ಟ್ರಸ್ಟ್‍ನ ನಿರ್ದೇಶಕ ಅಬ್ದುಲ್ ರೆಹಮಾನ್ ಮಾತನಾಡಿ ` ಸಂಸ್ಥೆ ಅಧ್ಯಕ್ಷರು ಹೆತ್ತವರಿಗೆ ಶಾಲೆ ಹೊರೆಯಾಗಬಾರದೆನ್ನುವ ಉದ್ದೇಶದಿಂದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಣತೊಟ್ಟು ಆರಂಭಿಸಿದರು. ಇದೀಗ ಕಣಚೂರು ಸಂಸ್ಥೆ ಪ್ರಾಥಮಿಕ ಹಾಗೂ ಉನ್ನತ ವ್ಯಾಸಾಂಗದಲ್ಲೂ ದಾಪುಗಾಲು ಹಾಕಿ ಐದು ವರ್ಷಗಳು ಯಶಸ್ವಿಯಾಗಿ ಸಂದಿವೆ ಎಂದರು.
ಮುಖ್ಯ ಅತಿಥಿಗಳಾಗಿ ನಿರ್ದೇಶಕರು ಅಬ್ದುಲ್ ರೆಹಮಾನ್, ಕಣಚೂರು ಕಾಲೇಜ್ ಆಫ್ ನಸಿರ್ಂಗ್ ಸೈನ್ಸ್ ಪ್ರಾಂಶುಪಾಲೆ ಪ್ರೊ. ಮೋಲಿ ಸಲ್ದಾನ್ಹ, ಕಣಚೂರು ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್, ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ.ಹೆಚ್.ಎಸ್ ವಿರೂಪಾಕ್ಷ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *