Header Ads
Header Ads
Breaking News

ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇದರ ವತಿಯಿಂದ ತಲಪಾಡಿ ಗ್ರಾಮದ ಪಿಲಿಕೂರು ಬಳಿ ನೂತನವಾಗಿ ನಿರ್ಮಿಸಿದ ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಆರೂಗ್ಯಧಿಕಾರಿ ಡಾ| ರಾಮಕೃಷ್ಣ ರಾವ್ ಲ್ಯಾಬೋರೇಟರಿ ಉದ್ಘಾಟಿಸಿದರು. ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ ಮೆಡಿಸಿನ್ ವಿಭಾಗವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಸದಸ್ಯೆ ಅಕ್ಷತಾ ಪಿಲಿಕೂರು ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು.
ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರ ಉದ್ಘಾಟನೆ ಪ್ರಯುಕ್ತ ಸಮುದಾಯ ಆರೋಗ್ಯ ವಿಭಾಗದ ಆಶ್ರಯ ದಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ಮತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಸಹಯೋಗದಲ್ಲಿ ರಕ್ತದಾನ ಶಿಬಿರ ಅಯೋಜಿಸಲಾಗಿತು.
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಡಿ.ಖಾದರ್ ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆಗೆ ಸರಕಾರದಿಂದ ವಿವಿಧ ಯೋಜನೆಗಳಿದ್ದು, ಇದಕ್ಕೆ ಪೂರಕವಾಗಿ ಖಾಸಗಿಆಸ್ಪತ್ರೆಗಳು ಗ್ರಾ ಮೀಣ ಪ್ರದೇಶದ ಜನರ ಆರೋಗ್ಯ ಕಾಳಜಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯವಾಗಿದ್ದು, ನೂತನವಾಗಿ ಆರಂಭಗೊಂಡ ಕಣಚೂರು ಸಮುದಾಯ ಆರೋಗ್ಯ ಕೇಂದ್ರದ ಪ್ರಯೋಜನವನ್ನು ಈ ಪ್ರದೇಶದ ಜನರು ಪಡೆದುಕೊಳ್ಳಬೇಕು ಎಂದರು. 
ಕಣಚೂರು ಯು.ಕೆ ಮೋನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ಹಿರಿಯರು ನೆಲೆಸಿದ ಈ ಜಾಗದಲ್ಲಿ ಹಿರಿಯರ ಹೆಸರಿನಲ್ಲಿ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲದಲ್ಲಿದ್ದೆ. ಇದೀಗ ಆರೋಗ್ಯ ಕೇಂದ್ರ ಸ್ಥಾಪಿಸುವ ಮೂಲಕ ಸಮಾಜದ ಆರೋಗ್ಯ ಸೇವೆಗೆ ಈ ಕೊಡುಗೆಯನ್ನು ನೀಡುತ್ತಿದ್ದು ಎಲ್ಲಾ ಧರ್ಮದ ವರ್ಗದವರ ಸಹಕಾರ ಅಗತ್ಯ ಎಂದರು.
ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಫ್ರೋ ಎಂ. ಬಿ. ಪುರಾಣಿಕ್, ತಲಪಾಡಿ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್, ಮಸೀದಿ ಉಪಾಧ್ಯಕ್ಷ ಮಹಮ್ಮದ್ ಕುಂಞಿ ತಲಪಾಡಿ ಜುಮಾ ಮಸೀದಿ ಖತೀಬರಾದ ಝೈನಿ ಖಾಮಿಲ್ , ತಾ.ಪಂ. ಸದಸ್ಯ ಅಬೂಬಕ್ಕಾರ್ ಸಿದ್ದಿಕ್, ಗ್ರಾಮ ಪಂಚಾಯತ್ ಸದಸ್ಯರಾದ ಫಯಾಝ್ ಪಿಲಿಕೂರು, ಫಾರೂಕ್, ರಕ್ತದಾನ ಶಿಬಿರದ ಸಂಯೋಜಕ ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಇದರ ಮಹಮ್ಮದ್ ಮುಸ್ತಾಫ, ಮಾಜಿ ಸದಸ್ಯ ಖಾದರ್ ತಲಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಜಯಂತಿ ಪಕ್ಕಳ, ಗಣೇಶ್ ಶೆಟ್ಟಿ, ಗೋಪಾಲ ಶೆಟ್ಟಿ, ಇಸ್ಮಾಯಿಲ್, ಖಾದರ್, ಕಣಚೂರು ವೈದ್ಯಕೀಯ ಕಾಲೇಜಿನ ನಿರ್ದೇಶಕ ರಹೆಮಾನ್, ಡೀನ್ ಡಾ| ಎಚ್. ಎಸ್. ವಿರೂಪಾಕ್ಷ , ವೈಸ್ ಡೀನ್ ಡಾ| ಶ್ರೀಶಾ ಖಂಡಿಗೆ, ಕಣಚೂರು ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಕರ್ನಲ್ ಡಾ| ಕೆ.ಜಿ.ಕಿರಣ್, ವೈದ್ಯಕೀಯ ಅಧೀಕ್ಷಕ ಡಾ| ದೇವಿಪ್ರಸಾದ್, ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್, ಕಣಚೂರು ಗ್ರಾಮೀಣ ಆರೋಗ್ಯ ಕೇಂದ್ರದ ಪಿಲಿಕೂರು ಇದರ ಮುಖ್ಯಸ್ಥ ಡಾ| ಶ್ರೀವತ್ಸ, ಸಮುದಾಯ ಆರೋಗ್ಯ ಕೇಂದ್ರದ ಮೆಡಿಕಲ್ ಸೋಶಿಯಲ್ ವರ್ಕರ್ ನಾಗರಾಜ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *