Header Ads
Breaking News

ಕಣಚೂರು ನರ್ಸಿಂಗ್ ಕಾಲೇಜಿನಲ್ಲಿ ಲ್ಯಾಂಪ್ ಲೈಟಿಂಗ್ ಸಮಾರಂಭ

ದೇರಳಕಟ್ಟೆಯ ಕಣಚೂರು ಅಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಇದರ ಕಣಚೂರು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಲ್ಯಾಂಪ್ ಲೈಟಿಂಗ್ ಮತ್ತು ಪ್ರತಿಜ್ಞಾ ವಿಧಿ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಶ್ರೀನಿವಾಸ್ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲೆ ಪ್ರೊ. ಫ್ಲೋರಿನ್ ಕ್ಲಾರಾ ಫೆರ್ನಾಂಡಿಸ್ ಲ್ಯಾಂಪ್ ಲೈಟಿಂಗ್ ಮತ್ತು ಪ್ರತಿಜ್ಞಾ ವಿಧಿ ಸಮಾರಂಭವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ದಾದಿಯರು ಸಮವಸ್ತ್ರ ಧರಿಸಿ ಕಾರ್ಯ ನಿರ್ವಹಿಸಿದಲ್ಲಿ ಕಾರ್ಯದ ಘನತೆ ಉಳಿಸಲು ಸಾಧ್ಯ. ನರ್ಸಿಂಗ್ ತರಬೇತಿ ಸೇರಿದ ಬಳಿಕ ಮನನೊಂದದಿರಿ, ಬರುವ ತೊಂದರೆಗಳನ್ನು ಎದುರಿಸಿ ಸೇವಾ ತರಬೇತಿಯಲ್ಲಿ ಮುಂದುವರಿದಲ್ಲಿ ಜೀವನದ ಯಶಸ್ಸು ಹಾದಿ ಸಿಗಲು ಸಾಧ್ಯ. ಮಾರ್ಗದರ್ಶಕರು, ಶಿಕ್ಷಕರ ಜತೆಗೂ ಉತ್ತಮ ಬಾಂಧವ್ಯವನ್ನು ಉಳಿಸಬೇಕಿದೆ ಎಂದರು.ಈ ಸಂದರ್ಭ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೊಧಿಸಲಾಯಿತು.

ನಾಟೆಕಲ್ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಆಸ್ಪತ್ರೆಯ ಅಧ್ಯಕ್ಷ ಯು.ಕೆ ಮೋನು ಕಣಚೂರು ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಸ್ತು, ನಡತೆ, ಸೌಜನ್ಯತೆ ಇದ್ದಲ್ಲಿ ದಾದಿಯರ ಜೀವನ ಯಶಸ್ವಿಯಾಗಲು ಸಾಧ್ಯ. ಈ ಮೂಲಕ ರೋಗಿಗಳಿಗೂ ಉತ್ತಮ ಸೇವೆಯನ್ನು ಪೂರೈಸಲು ಸಾಧ್ಯ ಎಂದರು.

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರು ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಐರಿನ್ ಡಿಸೋಜ, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಡೀನ್ ಡಾ.ಹೆಚ್.ಯಸ್. ವಿರೂಪಾಕ್ಷ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *