
ಕಣ್ಣಂಗಾರು ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ನೇಮೋತ್ಸವ ಸರ್ಕಾರ ನಿಗದಿ ಪಡಿಸಿದ ಸಮಯವನ್ನು ಪಾಲನೆ ಮಾಡುವ ಮೂಲಕ ನಡೆದಿದೆ.ಈ ಬಗ್ಗೆ ಮಾತನಾಡಿದ ಗರೋಡಿಯ ಪ್ರಧಾನ ಅರ್ಚಕ ಗಿರಿಧರ್ ಪೂಜಾರಿ, ಪ್ರತೀ ವರ್ಷದಂತೆ ಈ ವರ್ಷವೂ ನೇವೋತ್ಸವ ನಡೆದಿದೆಯಾದರೂ ಸರ್ಕಾರದ ಆದೇಶ ಪಾಲನೆ ನೀಡುವ ನಿಟ್ಟಿನಲ್ಲಿ ಸಮಯದ ಮಿತಿಯನ್ನು ಅರಿತು ಧಾರ್ಮಿಕ ವಿಧಿ ವಿದಾನಗಳನ್ನು ಬೇಗನೇ ಮುಗಿಸುವ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ.
ನೇಮೋತ್ಸವದ ದಿನ ಮಧ್ಯಾಹ್ನ ಹಾಗೂ ರಾತ್ರಿ ಭಕ್ತಾಧಿಗಳಿಗೆ ಅನ್ನ ಸಂತರ್ಪನೆ ಮಾಡಲಾಗಿದ್ದು ಸಹಸ್ರಾರು ಮಂದಿ ಪಾಲ್ಗೊಂಡಿದ್ದಾರೆ. ಜಾತಿ ಧರ್ಮಗಳನ್ನು ಮೀರಿ ಗ್ರಾಮಸ್ಥರೆಲ್ಲಾ ಸೇರಿ ನಡೆಯುವ ಈ ಧಾರ್ಮಿಕ ಕಾರ್ಯಕ್ಕೆ ಸಹಸ್ರಾರು ಭಕ್ತದಿಗಳು ಪಾಲ್ಗೊಂಡಿದ್ದಾರೆ ಎಂದರು. ಈ ಸಂದರ್ಭ ಗರೋಡಿಯ ಅಧ್ಯಕ್ಷ ಸೀನ ಪೂಜಾರಿ, ಹರೀಶ್ ಪೂಜಾರಿ, ಶ್ರೀಧರ ಪೂಜಾರಿ, ಸುಧಾಕರ್ ಎಂ. ಎಂ. ಮುಂತಾದವರಿದ್ದರು.