Header Ads
Header Ads
Breaking News

ಕಥುವಾದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಕೊಲೆ ಪ್ರಕರಣ ಮುಡಿಪು ಜಂಕ್ಷನ್‌ನಲ್ಲಿ ಡಿವೈಎಫ್‌ಐ ವತಿಯಿಂದ ಮೊಂಬತ್ತಿ ಪ್ರತಿಭಟನೆ ಈ ಘಟನೆ ಮಾನವ ಸಮುದಾಯವನ್ನೇ ತಲ್ಲಣಗೊಳಿಸಿದೆ ರಝಾಕ್ ಮೊಂಟೆಪದವು ಹೇಳಿಕೆ

ರಕ್ಷಣಾ ಬೇಲಿಯಾಗಬೇಕಿದ್ದ ಪೊಲೀಸರೇ ಕೇವಲ ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಭೀಕರವಾಗಿ ಕೊಲೆ ಮಾಡಿರುವು ಮೃಗೀಯ ವರ್ತನೆಯಾಗಿದೆ. ಈ ಘಟನೆ ಮಾನವ ಸಮುದಾಯವನ್ನೇ ತಲ್ಲಣಗೊಳಿಸಿದೆ ಎಂದು ರಝಾಕ್ ಮೊಂಟೆಪದವು, ಅಭಿಪ್ರಾಯಪಟ್ಟರು.

ಜಮ್ಮು ಕಾಶ್ಮೀರದಲ್ಲಿ ನಡೆದ ಆಸಿಫಾ ಹತ್ಯೆ ಖಂಡಿಸಿ ಡಿವೈಎಫ್ ಐ ವತಿಯಿಂದ ಮುಡಿಪು ಜಂಕ್ಷನ್ ನಲ್ಲಿ ನಡೆದ ಮೊಂಬತ್ತಿ ಪ್ರತಿಭಟನೆಯಲ್ಲಿ ಮಾತನಾಡಿದರು.
ಮೂರು ತಿಂಗಳ ಹಿಂದೆ ಘಟನೆ ನಡೆದಿದ್ದು ಆರೋಪಿಗಳು ಪವಿತ್ರ ದೇವಾಲಯದಲ್ಲಿ ಬಾಲಕಿಯನ್ನು ಭೀಕರವಾಗಿ ಬಳಸಿಕೊಂಡಿದ್ದಾರೆ. ಬಾಲಕಿ ಪರವಾಗಿ ಸತತ ಪ್ರತಿಭಟನೆ, ಹೋರಾಟ ನಡೆಸಿದ ಫಲವಾಗಿ ಅಲ್ಲಿನ ಸರ್ಕಾರ ದ ಆದೇಶದ ಮೇರೆಗೆ ಉನ್ನತ ತನಿಖೆ ನಡೆದು ಆರೋಪಿ ತಂಡದಲ್ಲಿದ್ದರೂ ಪ್ರಕರ ಬೆಳಕಿಗೆ ಬಂದಿದ್ದು, ಕಠಿಣ ಶಿಕ್ಷೆಯಾಗುವುದು ಶತಃಸಿದ್ಧ ಎಂದು ಹೇಳಿದರು.ಈ ಸಂದರ್ಭ ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ , ಡಿವೈಎಫ್ ಐ ಮುಖಂಡ ರಾದ ನಿತಿಲ್ ಕುತ್ತಾರ್, ರಝಾಕ್ ಮೊಂಟೆಪದವು, ಇಬ್ರಾಹಿಂ ಮದಕ, ಝುಬೈರ್ ಮುಡಿಪು, ಸುನಿಲ್ ಕುತ್ತಾರ್ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಆರೀಪ್ ಉಳ್ಳಾಲ