
ನಮ್ಮ ಬದುಕಿನಜೊತೆಗೆಇನ್ನೊಬ್ಬರ ಬದುಕನ್ನು ನಾವು ಆಳವಾಗಿ ತಿಳಿದುಕೊಂಡಷ್ಟು ನಮ್ಮಲ್ಲಿ ಹೊಸ ಅನುಭವಗಳು ಸೃಷ್ಠಿಯಾಗುತ್ತದೆ, ಆ ಎಲ್ಲಾಅನುಭವಯಾವತ್ತು ನಮ್ಮನ್ನುಕಾಡಲಿಕ್ಕೆ ಶುರು ಮಾಡುತ್ತದೋ ಆವಾಗ ನಾವು ನಿಜವಾದ ಬರಹಗಾರರು ಆಗಲಿಕ್ಕೆ ಸಾಧ್ಯಎಂದು ಬರಹಗಾರ, ಪ್ರಾಧ್ಯಪಾಕರಾಜೇಶೇಖರ ಹಳೆಮನಿ ತಿಳಿಸಿದರು.ಅವರುಇತ್ತೀಚೆಗೆಉಜಿರೆಎಸ್.ಡಿ. ಎಂ ಕಾಲೇಜಿನ ಬಿವೋಕ್, ಡಿಜಿಟಲ್ ಮೀಡಿಯಾ ಹಾಗು ಫಿಲ್ಮಂಮೇಕಿಂಗ್ವಿಭಾಗ ಆಯೋಜಿಸಿದ್ದ ‘ಪಕೋಡಾಟೇಲ್ಸ್, ಕಥೆಯೊಂದು ಹೇಳೋಣ’ಅನ್ನುವ ವಿನೂತನಾಕಥಾಕಮ್ಮಟದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದಯೋನ್ಮುಕ ಬರಹಗಾರದಾನೀಶ್ ಎಂ ಮಾತನಾಡಿ, ಕಲೆ ಯಾವತ್ತು ಬದುಕಿನಕನ್ನಡಿ, ಎಲ್ಲಾ ಕಲಾಪ್ರಕಾರಗಳು ಬದುಕಿನ ವಿವಿಧ ಮಜಲುಗಳನ್ನು ಆಕರ್ಷಕವಾಗಿಜನರಿಗೆತಲುಪಿಸುವ ಕೆಲಸ ಮಾಡುತ್ತದೆ. ಎಂದಿಗೂ ಕಲೆ ಇದನ್ನೆ ಮಾಡುತ್ತದೆಅನ್ನುವ ವಿಚಾರ ಪ್ರತಿಯೊಬ್ಬ ಬರಹಗಾರರು ಮನಗೊಂಡಿರಬೇಕುಎಂದು ಕಿವಿಮಾತು ಹೇಳಿದರು.ಸಮಾರಂಭದ ಮತ್ತೋರ್ವಅಥಿತಿಧಾರಾವಾಹಿ ಸಂಭಾಷಣೆಗಾರ್ತಿ ಪದ್ಮೀನಿ ಜೈನ್ ಮಾತಾಡಿ, ಕಥೆ ಬರಿಯುವುದಕ್ಕಿಂತಲೂ ಹೆಚ್ಚು ಸ್ವಾರಸ್ಯಕರ ಹಾಗೂ ಕ್ಷಿಷ್ಟಕರ ಕೆಲಸ ಅಂದ್ರೆಕಥೆ ಹೇಳುವಂತದ್ದು. ಬರೆಯುವ ವಿಧಾನದಲ್ಲಿತಿದ್ದಿತೀಡುವಅವಕಾಶವಿದೆಆದರೆ ಹೇಳುವ ವಿಧಾನದಲ್ಲಿ ಆ ಆವಾಕಾಶ ಇಲ್ಲ, ಎಲ್ಲವೂ ನಿಯೋಜಿತವಾಗಿರಬೇಕು, ಆದರೂಅದೊಂದುಖುಷಿಯ ಕೆಲಸ ಅಂದರು.
‘ಪಕೋಡಾಟೇಲ್ಸ್,ದಕಲೆಕ್ಟಿವ್ಆಫ್ಕ್ರಿಯೇಟಿವಿಟಿ’ ಇದೊಂದು ಹೊಸ ಪ್ರಯೋಗವಾಗಿದ್ದು,ಕಾಲೇಜಿನವಿದ್ಯಾರ್ಥಿಗಳು ಹಾಗು ಕಲಾ ಪ್ರಕಾರಗಳಲ್ಲಿ ಆಸಕ್ತಿಯಿರುವಎಲ್ಲರಿಗೆ ಪ್ರಯೊಜನಆಗುವಂತೆ, ಅವರ ಪ್ರಯೋಗಗಳಿಗೆ, ಆಭಿವ್ಯಕ್ತಿಗೆ ವೇದಿಕೆಯ ಜೊತೆಗೆಅವರದೇಆದಒಂದು ಸಮುದಾಯವನ್ನುರೂಪಿಸುವ ಮಹತ್ತರವಾದಉದ್ದೇಶವನ್ನುಇಟ್ಟುಕೊಂಡುಬಿವೋಕ್, ಡಿಜಿಟಲ್ ಮೀಡಿಯಾ ಹಾಗು ಫಿಲ್ಮಂಮೇಕಿಂಗ್ ವಿಭಾಗ ಈ ಒಂದುಸರಣಿಯನ್ನು ಆಯೋಜಿಸಿದೆ. 12 ತಿಂಗಳು ವಿವಿಧ ಕಲಾಪ್ರಕಾರಗಳ ವಿಚಾರಗಳು, ಅಭಿವ್ಯಕ್ತಿಗಳು ಈ ವೇದಿಕೆಯಡಿಯಲ್ಲಿ ನಡೆಯಲಿಕ್ಕಿದೆ. ಪ್ರತಿ ತಿಂಗಳು ಆಯ್ದಒಂದುಕಲಾಪ್ರಕಾರದ ವಿಷಯವನ್ನು ಪ್ರಚುರ ಪಡಿಸುವ ವಿಚಾರ ವಿನಿಮಯಬಿವೋಕ್ ವಿಭಾಗದಇನ್ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಚಾನೆಲ್ಗಳ ಮೂಲಕ ಆರಂಭವಾಗಿ, ತಿಂಗಾಳಂತ್ಯಕೆ ಒಂದುಕಡೆ ಸೇರಿಅನೌಪಾಚರಿಕವಾಗಿ ಮಾತನಾಡುವ ವಿಚಾರವನ್ನು ಹಂಚಿಕೊಳ್ಳುವ ಯೋಜನೆಯನ್ನು ಈ ಸರಣಿಕಾರ್ಯಕ್ರಮ ಹೊಂದಿದೆ. ಈ ನಿಟ್ಟಿನಲ್ಲಿಮೊದಲ ಪ್ರಯತ್ನವಾಗಿಕಥೆ ರಚಿಸಿ ಹೇಳುವ‘ಕಥೆಯೊಂದು ಹೇಳೋಣ’ ಅನ್ನುವಕಾರ್ಯಕ್ರಮವನ್ನುಆಯೋಜಿಲಾಗಿತು.ಸಮಾರಂಭದಲ್ಲಿಕಾಲೇಜಿನ ಕಾರ್ಯದರ್ಶಿ ಡಾ.ಬಿಯಶೋವರ್ಮ, ಶ್ರೀಮತಿ ಸೋನಿಯಾಯಶೋವರ್ಮ, ಪ್ರಾಂಶುಪಾಲರಾದಡಾ.ಸತೀಶ್ಚಂದ್ರ, ಹಾಗು ಸ್ನಾತಕೋತ್ತರ ವಿಭಾಗಾದಡೀನ್ಡಾ. ವಿಶ್ವನಾಥ್ ಹಾಗೂ ಬಿವೋಕ್ ವಿಭಾಗದ ಪ್ರಾಧ್ಯಪಾಕರಾದ, ಸುವೀರ್ಜೈನ್, ಮಾಧವ ಹೊಳ್ಳ, ಅಶ್ವಿನಿ ಜೈನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಿವೋಕ್ ವಿಭಾಗದಅನಿರುಧ್ಧಕಾರ್ಯಕ್ರಮವನ್ನು ನಿರೂಪಿಸಿದರು.