Breaking News

ಕದ್ರಿಯ ಯೋಧರ ಸ್ಮಾರಕ ಭವನದಲ್ಲಿ ಪ್ರತಿಜ್ಞಾ ವಿಧಿ ಬೋಧನೆ

 

ಯೋಧರನ್ನು ನೆನಪಿಸಿಕೊಳ್ಳುವವರು ಯಾರೂ ಇಲ್ಲ ದೇಶದಲ್ಲಿ ಉಗ್ರಗಾಮಿತ್ವ ಕಡಿಮೆಯಾಗಬೇಕು ಪ್ರಿನ್ಸಿಪಾಲ್ ಕಿಸ್ಮತ್ ವಿಕಿಲ್ ಅಹಮ್ಮದ್ ಹೇಳಿಕೆ ಪ್ರೆಸಿಡೆಂಟ್ ಸ್ಕೂಲ್‌ನಿಂದ ಕಾರ್ಯಕ್ರಮ
ಮಂಗಳೂರಿನ ಕದ್ರಿಯಲಿರುವ ಹುತಾತ್ಮ ಯೋಧರ ಸ್ಮಾರಕ ಭವನದಲ್ಲಿ ಮಂಗಳೂರಿನ ಪ್ರೆಸಿಡೆಂಟ್ ಸ್ಕೂಲ್ ವತಿಯಿಂದ ಪ್ರತಿಜ್ಞಾ ವಿಧಿ ಬೋಧನಾ ಕಾರ್ಯಕ್ರಮ ನಡೆಯಿತು.
ಮಂಗಳೂರಿನ ಪ್ರೆಸಿಡೆಂಟ್‌ನ ಸ್ಕೂಲ್‌ನ ಪ್ರಿನ್ಸಿಪಾಲ್ ಕಿಸ್ಮತ್ ವಿಕಿಲ್ ಅಹಮದ್ ಮಾತನಾಡಿ, ಭಾರತದಲ್ಲಿ ಅನೇಕ ವರುಷಗಳಿಂದ ಉಗ್ರಗಾಮಿತ್ವ ನಡೆಯುತ್ತಲೆ ಇದೆ. ಅನೇಕ ಯೋಧರ ಸಾವು ಸಂಭವಿಸಿದೆ ಯಾರು ಯೋಧರ ಬಗೆಗೆ ಗಮನ ನೀಡುತ್ತಿಲ್ಲ ಯೋಧರು ದೇಶ ಸೇವೆಯನ್ನು ಮಾಡಿದರು ಅವರನ್ನು ನೆನಪಿಸಿ ಕೋಳ್ಳುವವರು ಯಾರು ಇಲ್ಲ ಭಾರತ ದೇಶದಲ್ಲಿ ಅನೇಕ ಯೋಧರು ಉಗ್ರರ ಗುಂಡಿಗೆ ಬಲಿಯಾಗಿದ್ದರೆ. ಇನ್ನಾದರು ಉಗ್ರಗಾಮಿತ್ವ ಕಡಿಮೆಯಾಗಬೇಕು. ಅದಕ್ಕಾಗಿ ನಾವೆಲ್ಲಾರು ಸೇರಿ ಯೋಧರೊಂದಿಗಿದ್ದೆವೆಂದು ಪ್ರತಿಜ್ಞೆ ಮಾಡುತ್ತಿದೇವೆ ಎಂದು ಹೇಳಿದರು.
ಈ ಸಂದರ್ಭ ಪ್ರೆಸಿಡೆಂಟ್ ಸ್ಕೂಲ್‌ನ ವಿದ್ಯಾರ್ಥಿಗಳು ಮತ್ತು ಶಿಕ್ಷಕವೃಂದದವರು ಹಾಜರಿದ್ದರು.
ವರದಿ: ನಾಗರಾಜ್ ಮಂಗಳೂರು

Related posts

Leave a Reply