Header Ads
Breaking News

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ: ವಿಹಿಂಪ, ಭಜರಂಗದಳದ ವತಿಯಿಂದ ಉಚಿತ ಆಟೋರಿಕ್ಷಾ ಸೇವೆ

ಒಂದೆಡೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅಷ್ಟೋತ್ತರ ಬ್ರಹ್ಮಕಲಶೋತ್ಸವದ ಸಂಭ್ರಮ.. ಇನ್ನೊಂದಡೆ ಈ ಪುಣ್ಯ ಕಾರ್ಯವನ್ನು ಕಣ್ತುಂಬಿಸಿಕೊಳ್ಳಲು ಆಗಮಿಸುತ್ತಿರುವ ಸಾವಿರಾರು ಭಕ್ತಾಭಿಮಾನಿಗಳು.. ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಉಚಿತ ಆಟೋರಿಕ್ಷಾ ಸೇವೆ- ಇದು ಭಕ್ತಾದಿಗಳ ಅನುಕೂಲಕ್ಕೆ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಆಟೋರಿಕ್ಷಾ ಚಾಲಕರು ಮತ್ತು ಮಾಲಕರು ಮಾಡಿರುವ ಕಾರ್ಯ.. ಈ ಕಾರ್ಯಕ್ಕೆ ಜನರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.

ಹೌದು ಇತಿಹಾಸ ಪ್ರಸಿದ್ಧ, ಸಾವಿರ ಸೀಮೆಯ ಒಡೆಯ ಮಂಗಳೂರು ಸೀಮೆಯ ಪ್ರಧಾನ ದೇವರಾದ ಕದ್ರಿ ಶ್ರೀ ಮಂಜುನಾಥ ಸ್ವಾಮಿಗೆ ಹಾಗೂ ಪರಿವಾರ ದೇವರುಗಳಿಗೆ ಅಷ್ಟೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾದಂಡರುದ್ರಾಭಿಷೇಕ ಹಾಗೂ ಮಹಾರುದ್ರಯಾಗದ ಸಂಭ್ರಮ. ಮುಂಜಾನೆಯಿಂದ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಬರುವ ಭಕ್ತರಿಗೆ ಮಾವುದೇ ರೀತಿಯ ಸಂಚಾರಿ ಸಮಸ್ಯೆಯಾಗದಂತೆ ವಿಶ್ವಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ಉಚಿತ ಆಟೋರಿಕ್ಷಾ ಸೇವೆ ಒದಗಿಸಿ ಗಮನಸೆಳೆದಿದ್ದಾರೆ. ವಿಹಿಂಪ, ಭಜರಂಗದಳ ಮಂಗಳೂರು ಇವರ ವತಿಯಿಂದ ಸುಮಾರು ೧೦೦ಕ್ಕೂ ಹೆಚ್ಚು ಉಚಿತ ರಿಕ್ಷಾಗಳು ಉಚಿತವಾಗಿ ಓಡಾಟ ನಡೆಸಿವೆ.
ಈ ಸೇವೆಗೆ ಈ ವೇಳೆ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಅವರು, ಆಟೋರಿಕ್ಷಾಕ್ಕೆ ಸ್ಟಿಕ್ಕರ್ ಅಂಟಿಸಿ ಕೇಸರಿ ಬಾವುಟವನ್ನು ಹಾರಿಸುವ ಮೂಲಕ ಈ ಉಚಿತ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಈ ನಿಟ್ಟಿನಲ್ಲಿ ನಾವೇನಾದರು ಸೇವೆ ಮಾಡಬೇಕು ಎನ್ನುವ ಆಶಯದಿಂದ ಸುಮಾರು ೧೦೦ ರಿಕ್ಷಾವನ್ನು ಆಗಮಿಸುವ ಭಕ್ತಾಭಿಮಾನಿಗಳ ಅನುಕೂಲವಾಗುವಂತೆ ಹತ್ತಿರದ ಬಸ್‌ಸ್ಟ್ಯಾಂಡ್‌ನಿಂದ ದೇವಸ್ಥಾನಕ್ಕೆ ಮತ್ತು ದೇವಸ್ಥಾನದಿಂದ ಹತ್ತಿರದ ಬಸ್‌ಸ್ಟ್ಯಾಂಡ್‌ಗೆ ಉಚಿತವಾಗಿ ಅವರನ್ನು ಕೊಂಡೋಯ್ಯವ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.


ಒಟ್ಟಿನಲ್ಲಿ ವಿಶ್ವಹಿಂದೂ ಪರಿಷತ್ ಭಜರಂಗದಳ ಆಟೋರಿಕ್ಷಾ ಚಾಲಕರು ಮತ್ತು ಮಾಲಕರು ಮಾಡಿರುವ ಕಾರ್ಯಕ್ಕೆ ಭಕ್ತಾದಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾವಿರಾರು ಭಕ್ತಾದಿಗಳು ಈ ಸೇವೆಯನ್ನು ಬಳಸಿಕೊಂಡು ಮಂಜುನಾಥನ ದರ್ಶನ ಪಡೆದು ಕೃತಾರ್ಥರಾದರು.

Related posts

Leave a Reply

Your email address will not be published. Required fields are marked *