Header Ads
Breaking News

ಕರಾವಳಿಯಲ್ಲಿ ಕರೊನಾ ವೈರಸ್ ಭೀತಿ ಹಿನ್ನೆಲೆ : ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ ನಗರದ ಪಿಲಿಕುಳ ನಿಸರ್ಗಧಾಮ

ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ತೆಗೆದುಕೊಂಡ ಎಚ್ಚರಿಕಾ ಕ್ರಮಗಳನ್ವಯ ನಗರದ ಪಿಲಿಕುಳ ನಿಸರ್ಗಧಾಮ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.ಪಿಲಿಕುಳ ಜೈವಿಕ ಉದ್ಯಾನ, ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಬಂದ್ ಆಗಿದೆ. ಪಿಲಿಕುಳ ನಿಸರ್ಗಧಾಮದ ಎಲ್ಲ ಸಿಬ್ಬಂದಿಗೆ ಆಡಳಿತ ಮಾಸ್ಕ್ ವಿತರಿಸಿದೆ. ಪ್ರಾಣಿಗಳು ಮತ್ತು ಪಕ್ಷಿಗಳ ಸಂರಕ್ಷಣೆ ನೋಡಿಕೊಳ್ಳುವ ನಿಸರ್ಗಧಾಮ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಪಿಲಿಕುಳದಲ್ಲಿ ಪ್ರವಾಸಿಗರ ಟಿಕೆಟ್ ಕೇಂದ್ರ ಮಾಹಿತಿ ಕೇಂದ್ರವಾಗಿ ಮಾರ್ಪಟ್ಟಿದೆ. ಇನ್ನು ಕದ್ರಿ ಪಾರ್ಕ್‍ನಲ್ಲೂ ಜನರು ಇಲ್ಲದೇ ಪಾರ್ಕ್ ಬಿಕೋ ಎನ್ನುತ್ತಿದೆ.

Related posts

Leave a Reply

Your email address will not be published. Required fields are marked *