Header Ads
Breaking News

ಕರಾವಳಿಯಲ್ಲಿ ಮತ್ತೆ ಮುಂದುವರಿದ ಮಳೆ : ಹವಾಮಾನ ಇಲಾಖೆಯಿಂದ ಆರೆಂಜ್ ಆಲರ್ಟ್ ಘೋಷಣೆ

ಕರಾವಳಿಯಾದ್ಯಂತ ಕೆಲ ದಿನಗಳಿಂದ ಕೊಂಚ ಬಿಡುವುಗೊಂಡಿದ್ದ ಮಳೆಯ ಆರ್ಭಟ ಇದೀಗ ಮತ್ತೆ ಚುರುಕುಗೊಂಡಿದ್ದು, ಮಂಗಳೂರು ನಗರದ ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಈಗಾಗಲೇ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಆಲರ್ಟ್ ಘೋಷಿಸಿದ್ದು, 115.6 ಮಿಲಿ ಮೀಟರ್ ನಿಂದ 204.4. ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೀಗ ನಗರದ ಹಲವೆಡೆ ಮಳೆಯಾಗಿದ್ದು, ರಸ್ತೆಯು ಜಲಾವೃತಗೊಂಡಿದ್ದು ಶಾಲಾ ಮಕ್ಕಳು, ಪ್ರಯಾಣಿಕರು ಪರದಾಡುವಂತೆ ಆಗಿದೆ. ಇನ್ನು ಉಡುಪಿಯಲ್ಲೂ ನಿನ್ನೆ ಸಂಜೆಯಿಂದ ಭಾರೀ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಸೂಚನೆ ನೀಡಿದೆ.

Related posts

Leave a Reply

Your email address will not be published. Required fields are marked *