Header Ads
Header Ads
Breaking News

ಕರಾವಳಿಯಲ್ಲಿ ಮಳೆಯ ಅವಾಂತರ ಶೆಡ್ಡ್ ಸಹಿತ ಕುಸಿದು ಬಿದ್ದ ಬಾವಿ

ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಅದಮಾರು ಸಮೀಪದ ಬರ್ಪಣಿ ಎಂಬಲ್ಲಿ ಬೃಹತ್ ಬಾವಿಯೊಂದು ಶೆಡ್ಡ್ ಸಹಿತ ಕುಸಿದು ಬಿದ್ದು ಸುಮಾರು ಹತ್ತು ಲಕ್ಷ ನಷ್ಟ ಸಂಭವಿಸಿದೆ.ಈ ಬಾವಿಯ ನೀರನ್ನು ಸುತ್ತಲ ಐದಾರು ಕುಟುಂಬಗಳು ಕೃಷಿ ಚಟುವಟಿಕೆಗಾಗಿ ಬಳಸುತ್ತಿದ್ದು, ಇದೀಗ ಈ ಬಾವಿ ಕುಸಿತದಿಂದಾಗಿ ಈ ಭಾಗದ ಜನರು ಕೃಷಿ ಚಟುವಟಿಕೆಯಿಂದ ವಂಚಿತರಾಗಿದ್ದಾರೆ. ಮಳೆ ನೀರಿಗಿಂತಲೂ ಈ ಬಾವಿ ನೀರನ್ನೇ ಕೃಷಿ ಕರಾದ ನಾವು ನೆಚ್ಚಿಕೊಂಡಿದ್ದೇವೆ ಎನ್ನುತ್ತಾರೆ ಬರ್ಪಣಿ ನಿವಾಸಿ ಸಂತೋಷ್ ಶೆಟ್ಟಿ ಬರ್ಪಣಿ.

 

Related posts

Leave a Reply