Header Ads
Header Ads
Header Ads
Header Ads
Header Ads
Header Ads
Breaking News

ಕರಾವಳಿಯಲ್ಲಿ ಮುತ್ತೈದೆಯರ ವಿಶೇಷ ಆಚರಣೆ : ಚೂಡಿ ಪೂಜೆಯಲ್ಲಿ ಭಕ್ತಿಯಿಂದ ಭಾಗವಹಿಸುವ ಮಹಿಳೆಯರು

ಕರಾವಳಿಯಲ್ಲಿ ಹಬ್ಬಗಳಿಗೆ ಬರವಿಲ್ಲ. ಆರಾಧನೆಗೆ ಹಲವು ಬಗೆ. ಗಿಡ ಮರ ಬಳ್ಳಿ ಕಲ್ಲು ಹೀಗೆ ಎಲ್ಲದರಲ್ಲೂ ದೈವತ್ವವನ್ನು ಕಂಡುಕೊಂಡ ಸಂಸ್ಕೃತಿ ನಮ್ಮದು. ಆಷಾಢ ಶ್ರಾವಣದಲ್ಲಿ ಪ್ರಕೃತಿಯನ್ನು ಆರಾಧಿಸುತ್ತೇವೆ . ಈ ಸಮಯದಲ್ಲಿ ಜಿಎಸ್ ಬಿ ಸಮಾಜದವರು ಮುತ್ತೈದೆ ಭಾಗಯಕ್ಕಾಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ ಪೃಕೃತಿಗೆ ಮಾತೆಗೆ ನಮನ ಸಲ್ಲಿಸಲು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಮಹಿಳೆಯರು ನಡೆಸುವ ಪೂಜೆಯೇ ಚೂಡಿ ಪೂಜೆ.ಮಳೆಗಾಲ ಜಿಟಿಜಿಟಿ ಮಳೆಗೆ ಪ್ರಕೃತಿ ಮೈತುಂಬಿ ಎಲ್ಲೆಲ್ಲೂ ಹಸಿರು ಸೆರಗು ಹೊದ್ದಂತೆ ಕಾಣುತ್ತದೆ. ಶ್ರಾವಣ ಮಾಸದಲ್ಲಿ ಬರುವ ಶುಕ್ರವಾರ ಮತ್ತು ಭಾನುವಾರ ಈ ಪೂಜೆಯನ್ನು ನಡೆಸಲಾಗುತ್ತೆ. ಮುತ್ತೈದೆಯರು ಮುಂಜಾನೆ ಸ್ನಾನ ಮಾಡಿ ಬಂದು ತುಳಸಿಕಟ್ಟೆ ಬಳಿ ರಂಗೋಲಿ ಹಾಕಿದ ನಂತರ ಮನೆಯ ಹೊಸ್ತಿಲಲ್ಲಿ ಶೇಡಿ ಬರೆಯುತ್ತಾರೆ. ಪೃಕೃತಿಯಲ್ಲಿ ಸಿಗೋ ಕರವೀರ, ಅಗತೆ, ಕಾಗೆಕಣ್ಣು, ಶಂಖಪುಷ್ಪ, ಗರಿಕೆ, ರತ್ನಗಂಧಿ ಹೂವುಗಳನ್ನು ತಂದು ತುಳಸೀಕಟ್ಟೆ ಮುಂದೆ ಅರಸಿನ – ಕುಂಕುಮ ಅಕ್ಷತೆ ಕಾಳಿನ ಜೊತೆಗೆ ಆರತಿ ಎತ್ತಿ ಪೂಜೆ ಮಾಡಲಾಗುತ್ತದೆ. ತುಳಸಿಯಲ್ಲಿ ಶ್ರಾವಣ ಮಾಸದಲ್ಲಿ ಮುಕ್ಕೋಟಿ ದೇವರು ನೆಲೆಸುತ್ತಾನೆ ಎಂಬ ನಂಬಿಕೆಯ ಆಧಾರದಲ್ಲಿ ಈ ಪೂಜೆಯನ್ನು ವಿಜ್ರಂಭಣೆಯಿಂದ ನಡೆಸಲಾಗುತ್ತದೆ

ಹೊಸದಾಗಿ ಮದುವೆಯಾದ ಸೊಸೆ ಅತ್ತೆ ಮತ್ತು ಅಮ್ಮನ ನಿರ್ದೇಶನದಂತೆ ಪೂಜೆ ನಡೆಸುತ್ತಾರೆ. ತಾನು ಹುಟ್ಟಿದ ಮನೆ ಮತ್ತು ಮದುವೆಯಾಗಿ ಬಂದ ಮನೆಯಲ್ಲಿ ಸದಾ ಸಮೃದ್ಧಿ ನೆಲೆಸಲಿ ಎಂದು ಪೂಜೆ ಸಲ್ಲಿಸುತ್ತಾರೆ. ಪೂಜಿಸಿದ ಚೂಡಿಯನ್ನು ಮುಡಿದ ಮುತ್ತೈದೆಯರು ತಮ್ಮ ಪತಿಗೆ ವೀಳ್ಯ ನೀಡಿ ಆಶೀರ್ವಾದ ಪಡೆಯುತ್ತಾರೆ. ನಂತರ ಮನೆಯ ಹಿರಿಯರಿಗೆ ಹಾಗೂ ಸಂಬಂಧಿಕರಿಗೆ ಚೂಡಿಯನ್ನು ನೀಡುತ್ತಾರೆ. ಪತಿಯ ಆರೋಗ್ಯ ಚೆನ್ನಾಗಿರುವ ಮೂಲಕ ಮುತ್ತೈದೆತನ ಉಳಿಯಲಿ ಎಂಬ ಉದ್ದೇಶದ ಜೊತೆಗೆ ದಾಂಪತ್ಯ ಜೀವನವೂ ಸಮರಸದಿಂದ ಕೂಡಿರಲಿ ಎನ್ನುವ ಹಾರೈಕೆ ಈ ಪೂಜೆಯ ವಿಶೇಷ. ಜೊತೆಗೆ ಜೀವನದಲ್ಲಿ ಸಹಕರಿಸುತ್ತಿರುವ ಪ್ರಕೃತಿಗೆ ನಮನ ಸಲ್ಲಿಸುವುದು ಈ ಪೂಜೆಯ ಇನ್ನೊಂದು ವೈಶಿಷ್ಟ್ಯತೆ.

ಚೂಡಿ ಪೂಜೆ ಗೌಡ ಸಾರಸ್ವತರಲ್ಲದೇ ವಿಶ್ವಕರ್ಮರಲ್ಲಿ, ದೈವಜ್ನರಲ್ಲಿಯೂ ಈ ಪದ್ಧತಿ ಇದೆ. ಆದರೆ ಜಿಎಸ್ ಬಿ ಸಮಾಜದವರು ಇದನ್ನು ವಿಶೇಷ ವೃತ ಸಹಿತ ಆಚರಿಸುತ್ತಾರೆ. ಆಚರಣೆಯ ಮೂಲಕ ಪ್ರಕೃತಿಯನ್ಬು ಅರಾಧಿಸುವ ಈ ಆಚರಣೆ ವಿಶಿಷ್ಟವೆನಿಸಿದೆ.

Related posts

Leave a Reply

Your email address will not be published. Required fields are marked *