Header Ads
Header Ads
Breaking News

ಕರಾವಳಿಯಾದ್ಯಂತ “ಏರಾ ಉಲ್ಲೆರ್‌ಗೆ”, “ಮೈ ನೇಮ್ ಇಸ್” ಅಣ್ಣಪ್ಪ ಚಿತ್ರ ತೆರೆಗೆ

ತುಳುನಾಡಿನ ತುಳು ಸಿನಿಮಾ ರಸಿಕರಿಗೆ ಹಬ್ಬದ ಇಂದು ಹಬ್ಬದ ವಾತಾವರಣ. ಹೌದು ಇಂದು ಏರಾ ಉಲ್ಲೆರ್‌ಗೆ ಮತ್ತು ಮೈ ನೇಮ್ ಈಸ್ ಅಣ್ಣಪ್ಪ ತುಳು ಚಲನಚಿತ್ರ ಕರಾವಳಿಯಾದ್ಯಂತ ತೆರೆ ಕಂಡಿತು.ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ವಿಭಿನ್ನ ಪರಿಕಲ್ಪನೆಯ ಚಿತ್ರ ಏರಾ ಉಲ್ಲೆರ್‌ಗೆ ಇಂದು ಕರಾವಳಿಯಾದ್ಯಂತ ಬಿಡುಗಡೆಗೊಂಡಿತು. ಮಂಗಳೂರಿನ ರಮಾಕಾಂತಿ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಗೊಂಡಿತು. ಶಾಸಕ ವೇದವ್ಯಾಸ ಕಾಮತ್ ಮತ್ತು ಡಾ. ವಿವೇಕ್ ರೈ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಚಿತ್ರದ ನಿರ್ದೇಶಕ ದೇವದಾಸ್ ಕಾಪಿಕಾಡ್, ನಿರ್ಮಾಪಕಿ ಶರ್ಮಿಳಾ ಕಾಪಿಕಾಡ್, ನಟ ಅರ್ಜುನ್ ಕಾಪಿಕಾಡ್, ದೇವದಾಸ್ ಪಾಂಡೇಶ್ವರ ಮತ್ತು ಚಿತ್ರ ತಂಡದ ಕಲಾವಿದರು ಉಪಸ್ಥಿತರಿದ್ದರು.

ಇನ್ನು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಮಯೂರ್ ಶೆಟ್ಟಿ ನಿರ್ದೇಶನದ ಮೈ ನೇಮ್ ಇಸ್ ಅಣ್ಣಪ್ಪ ತುಳು ಚಲನಚಿತ್ರ ತೆರೆಕಂಡಿತು. ಕನ್ನಡದ ಜನಪ್ರಿಯ ಕಲಾವಿದ ರಂಗಾಯನ ರಘು ನಟಿಸಿರುವುದು ಚಿತ್ರದ ಇನ್ನೊಂದು ವಿಶೇಷತೆ. ಜ್ಯೋತಿ ಚಿತ್ರಮಂದಿರದಲ್ಲಿ ಚಿತ್ರದ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮವ್ನನು ತುಳು ಅಕಾಡೆಮಿಯ ಅಧ್ಯಕ್ಷರಾದ ಎ.ಸಿ ಭಂಡಾರಿ ಅವರು, ದೀಪ ಬೆಳಗಿಸಿ ಉದ್ಘಾಟಿಸಿದರು. ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅವರು ಭಾಗವಹಿಸಿ ಚಿತ್ರಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಲಯನ್ ಡಿ. ಕಿಶೋರ್ ಶೆಟ್ಟಿ, ಜಗನ್ನಾಥ್ ಬಾಳಾ, ನಟ ಮಂಜು ರೈ ಮೂಳೂರು ಹಾಗೂ ಚಿತ್ರ ತಂಡದ ಕಲಾವಿದರು ಭಾಗವಹಿಸಿದ್ದರು,

Related posts

Leave a Reply