Header Ads
Header Ads
Breaking News

ಕರಾವಳಿಯಾದ್ಯಂತ “ಬೆಲ್ಚಪ್ಪ”ದ್ದೇ ಹವಾ….! ಆಗಸ್ಟ್ 9ರಂದು ಚಿತ್ರಮಂದಿರಲ್ಲಿ ಬೆಲ್ಚಪ್ಪ

ಯುವ ನಿರ್ದೇಶಕ ಉಡುಪಿ ಮೂಲದ ರಜನೀಶ್ ದೇವಾಡಿಗ ನಟಿಸಿ, ನಿರ್ದೇಶಿಸಿರುವ ಬೆಲ್ಚಪ್ಪ ತುಳು ಸಿನಿಮಾ ಕರಾವಳಿಯಾದ್ಯಂತ ಹವಾ ಸೃಷ್ಟಿಸುತ್ತಿದೆ. ಕೇವಲ 14 ದಿನಗಳಲ್ಲಿ ಶೂಟಿಂಗ್ ಮುಗಿಸಿ ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದಿದ್ದ ಚಿತ್ರ ತಂಡ ನಂತರ ಟ್ರೈಲರ್ ರಿಲೀಸ್ ಆದ ದಿನದಿಂದಲ್ಲೂ ಹೊಸ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗುತ್ತಿದೆ.

ಕೋಸ್ಟಲ್ ವುಡ್ ನಲ್ಲಿ ಸದ್ಸ್ಯಕ್ಕೆ ಯಾವುದೇ ಚಿತ್ರಗಳು ಚಿತ್ರಮಂದಿರದಲ್ಲಿ ಇಲ್ಲ ಎಂದು ಬೇಸರದಲ್ಲಿದ್ದರೆ, ಇಲ್ಲೋಂದು ಗುಡ್ ನ್ಯುಸ್ ಇದೆ…. ಈಗಾಗಲೇ ಟೈಟಲ್ ಮೂಲಕ ಸುದ್ದಿಯಲ್ಲಿರುವ ಬೆಲ್ಚಪ್ಪ ಚಿತ್ರ ಬೆಳ್ಳಿ ತೆರೆಗೆ ಬರಲು ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಹಾಗೂ ಜನರಲ್ಲಿ ನಿರೀಕ್ಷೆ ಹುಟ್ಟಿಸಿರುವ ಬೆಲ್ಚಪ್ಪ ಆಗಸ್ಟ್ 9 ರಂದು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ನೆಲೆಯಾಗಲಿದ್ದಾನೆ. ಕೇವಲ 14 ದಿನಗಳಲ್ಲಿ ಇದುವರೆಗೆ ಯಾವುದೇ ಸಿನೆಮಾ ತನ್ನ ಶೂಟಿಂಗ್ ಮುಗಿಸಿರಲಿಲ್ಲ.ಆದ್ರೆ ಬೆಲ್ಚಪ್ಪಾ ಮಾತ್ರ ಈ ದಾಖಲೆಯನ್ನ ಧೂಳಿ ಪಟ ಮಾಡಿದೆ. ಇನ್ನು ಟ್ರೆಲರ್ ಬಿಡುಗಡೆದ್ದು ಬೇರೆನೇ ವಿಷ್ಯ ಇದೆ..

ಟ್ರೈಲರ್ ರಿಲೀಸ್ ಮಾಡಿದ್ದು ಕೂಡಾ ವಿಭಿನ್ನ ಶೈಲಿಯಲ್ಲಿ ಎಂಬುದು ಗಮನಿಸಬೇಕಾದ ಅಂಶ..ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಆನೆ ಗಜ ಲಕ್ಷ್ಮೀ ಈ ಸಿನೆಮಾದ ಟ್ರೈಲರ್ ರಿಲೀಸ್ ಮಾಡಿದ್ದು ವಿಶೇಷವಾಗಿದ್ದು ಇದುವರೆಗೆ ಯಾವ ಸಿನೆಮಾ ತಂಡ ಈ ರಿತಿ ವಿಭಿನ್ನವಾಗಿ ಯೋಚಿಸಿರಲಿಲ್ಲ. ಟ್ರೈಲರ್ ಬಿಡುಗಡೆಯ ನಂತರ ಲಕ್ಷಾಂತರ ಮಂದಿ ಟ್ರೈಲರ್ ನೋಡಿ ಮೆಚ್ಚಿಕೊಂಡಿದ್ದಾರೆ. ಮಾತ್ರವಲ್ಲದೇ ದರ್ಶನ್ ಅಭಿಮಾನಿಗಳೂ ಟ್ರೈಲರ್ ನೋಡಿ ಖುಷಿ ಪಟ್ಟಿದ್ದು ಚಿತ್ರ ವೀಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ. ಇದೀಗ ಎಲ್ಲರ ನಿರೀಕ್ಷೆ ಯಾವಾಗ ಚಿತ್ರ ಬೆಳ್ಳಿ ತೆರೆಯ ಮೇಲೆ ಬರುತ್ತದೆ ಎಂಬುದು…ತುಳುನಾಡಿನ ಸಮಸ್ತ ಅಭಿಮಾನಿಗಳು, ಚಿತ್ರ ರಸಿಕರಿಗೆ ಚಿತ್ರ ತಂಡ ಗುಡ್ ನ್ಯುಸ್ ನೀಡಿದ್ದು ಆಗಸ್ಟ್ 9 ರಂದು ಸಿನೆಮಾ ಬಿಡುಗಡೆ ಮಾಡುವ ಬಗ್ಗೆ ಘೋಷಣೆ ಮಾಡಿದೆ. ಬೆಲ್ಚಪ್ಪ ಸಿನೆಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಅರವಿಂದ ಬೋಳಾರ್ ನಟಿಸಿದ್ದಾರೆ. ನಾಯಕನಾಗಿ ರಜನೀಶ್ , ನಾಯಕಿಯಾಗಿ ಯಶಸ್ವಿ ದೇವಾಡಿಗ, ಸುಕನ್ಯಾ ಮುಖ್ಯ ಪಾತ್ರದಲ್ಲಿದ್ದಾರೆ.ಹಾಸ್ಯ ಕಲಾವಿದರಾದ ಉಮೇಶ್ ಮಿಜಾರು,ದೀಪಕ್ ರೈ ಪಾಣಾಜೆ, ಯಜ್ಞೇಶ್ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಹಾಸ್ಯ ಮಿಶ್ರಿತ, ಅಷ್ಟೇ ಕಥಾ ಹಂದರ ಹೊಂದಿರುವ ಪ್ಯಾಮಿಲಿ ಎಂಟಟೈನಿಂಗ್ ಸಿನೆಮಾ ಇದಾಗಿದ್ದು ಈಗಾಗಲೇ ಕಾರವಳಿಯ ಜನರು ಬೆಲ್ಚಪ್ಪದ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೇ ಚಿತ್ರ ನೋಡುವ ತವಕದಲ್ಲಿದ್ದಾರೆ.ಬೆಲ್ಚಪ್ಪ ಸಿನೆಮಾ ಹಾಗೂ ಚಿತ್ರ ತಂಡಕ್ಕೆ ಗುಡ್ ಲಕ್ ಅನ್ನೋನ…

Related posts

Leave a Reply

Your email address will not be published. Required fields are marked *