Header Ads
Breaking News

ಕರಾವಳಿಯೆಲ್ಲೆಡೆ ಸರಳವಾಗಿ ನಾಗರ ಪಂಚಮಿ ಆಚರಣೆ : ನಾಗರಪಂಚಮಿಯ ಸಂಭ್ರಮಕ್ಕೆ ತಣ್ಣೀರೆರಚಿದ ಕರೋನ ಕರಿಛಾಯೆ

ನಾಗಾರಾಧನೆಗೆ ನಮ್ಮ ನಾಡಿನಲ್ಲೇ ಪ್ರಸಿದ್ದವಾಗಿರುವ ಸ್ಥಳ ಕರಾವಳಿ ಜಿಲ್ಲೆಗಳು. ಆದರೆ ಈ ವರ್ಷ ಮಾತ್ರ ಕರೋನದ ಕರಿಛಾಯೆ ನಾಗರಪಂಚಮಿಯ ಸಂಭ್ರಮಕ್ಕೆ ತಣ್ಣೀರೆರಚಿದೆ. ಈ ವಿಶೇಷ ವರದಿ ಇಲ್ಲಿದೆ ನೋಡಿ..

ಕರಾವಳಿ ಜಿಲ್ಲೆಗಳಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ ಅದರಲ್ಲೂ ಉಡುಪಿಯನ್ನು ರಜತಪೀಠ ಪುರ ಎಂದೇ ಕರೆಯುತ್ತಾರೆ. ಪರಶುರಾಮ ಇಲ್ಲಿ ಉಡುಪಿಯ ನಾಲ್ಕು ಮೂಲೆಗಳಿಗೆ 4 ನಾಗ ಸಾನಿಧ್ಯಗಳನ್ನು ನಿರ್ಮಿಸಿ ಅಲ್ಲಿ ನಿತ್ಯವೂ ನಾಗನ ಪೂಜೆ ನಡೆಯುವಂತೆ ಕಟ್ಟಲೆ ಮಾಡಿಸಿದ್ದರಂತೆ. ಹೀಗಾಗಿ ಇಲ್ಲಿ ನಾಗನಿಗೆ ನಾಗಮಂಡಲ ಆಶ್ಲೇಷ ಬಲಿ ಹಾಲಿಟ್ಟು ಸೇವೆ ಸರ್ಪಸಂಸ್ಕಾರ ಸೇವೆಗಳು ವಿಜೃಂಭಣೆ ಯಿಂದ ನಡೆಯುತ್ತವೆ. ನಾಗರ ಪಂಚಮಿಯ ದಿನದಂದು ಕರಾವಳಿಯ ಎಲ್ಲಾ ಜನರು ತಮ್ಮ ಕುಟುಂಬದ ನಾಗನ ಮೂಲ ಬನಕ್ಕೆ ತೆರಳಿ ತನು ಸೇವೆಯನ್ನು ಅರ್ಪಿಸುತ್ತಾರೆ. ಆದರೆ ಈ ವರ್ಷ ಮಾತ್ರ ಜಿಲ್ಲಾಧಿಕಾರಿಯವರು ಸಾರ್ವಜನಿಕ ನಾಗರ ಪಂಚಮಿ ಆಚರಣೆಗೆ ಅವಕಾಶವನ್ನು ನೀಡಿಲ್ಲ. ಇದರ ನೇರ ಪರಿಣಾಮ ಆಗಿರೋದು ಬಡ ವ್ಯಾಪಾರಿಗಳ ಮೇಲೆ.

 ಹೌದು ಪ್ರತಿವರ್ಷ ಮಲೆನಾಡು ಮತ್ತು ಬಯಲುಸೀಮೆಯ ಹತ್ತಾರು ವ್ಯಾಪಾರಿಗಳು ಉಡುಪಿಗೆ ಬಂದು ಇಪ್ಪತ್ತು ಮೂವತ್ತು ಸಾವಿರದ ಹೂವಿನ ವ್ಯಾಪಾರ ಮಾಡಿ ಹೋಗುತ್ತಿದ್ದರು. ಆದರೆ ಈ ವರ್ಷ ನಾಗರಪಂಚಮಿ ಆಚರಣೆ ಮೇಲೆ ನಿರ್ಬಂಧವಿರುವ ಕಾರಣ ಹೂವಿನ ವ್ಯಾಪಾರಿಗಳಿಗೆ ಐದಾರು ಸಾವಿರ ವ್ಯಾಪಾರವಾಗುವುದು ಕಷ್ಟವಾಗಿದೆ. ಇನ್ನೂ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ತಮ್ಮ ಸ್ವಂತ ವಾಹನಗಳಲ್ಲಿ ಹೂವನ್ನು ಹೊತ್ತು ಇವರು ಇಲ್ಲಿಗೆ ಬಂದಿದ್ದಾರೆ. ಬಂದಾ ವಾಹನದ ಖರ್ಚು ಕೂಡ ನಮಗೆ ಗಿಟ್ಟುವುದಿಲ್ಲ ಎನ್ನುವುದು ವ್ಯಾಪಾರಿಗಳ ಅಳಲು.

ಕೇವಲ ಉಡುಪಿ ಜಿಲ್ಲೆಯಲ್ಲೇ 13 ಸಾವಿರಕ್ಕೂ ಅಧಿಕ ನಾಗಬನ ಗಳಿವೆ. ನಾಗನಿಗೆ ಸಂಬಂಧಿಸಿದ ಹಲವಾರು ಕ್ಷೇತ್ರಗಳಿವೆ. ಇಲ್ಲಿನ ಅರ್ಚಕರಿಗೆ ನಾಗರಪಂಚಮಿಯಂದು ಕೈತುಂಬ ಆದಾಯ ಬರುತ್ತಿತ್ತು. ಆದರೆ ಈ ವರ್ಷ ಮಾತ್ರ ಈ ತಟ್ಟೆ ಕಾಸಿಗೂ ಕಲ್ಲು ಬಿದ್ದಿದೆ. ಜನರು ತಮ್ಮ ನಾಗಬನಗಳಲ್ಲಿ ಹೂವು ಹಿಂಗಾರ ಸೀಯಾಳ ಮೊದಲಾದ ದ್ರವ್ಯಗಳನ್ನು ಬಿಟ್ಟು ಹೋಗುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *