Header Ads
Header Ads
Breaking News

ಕರಾವಳಿಯ ಖಾದ್ಯಪ್ರಿಯರಿಗೆಂದೆ ಕಬಾಬ್ ಸ್ಟುಡಿಯೋದಲ್ಲಿ ನಡೆಯತ್ತಿದೆ ಇಂಡೋ-ಚೈನಿಸ್ ಫುಡ್ ಫೆಸ್ಟಿವಲ್

 ರುಚಿರುಚಿಯಾಗಿರುವ ವಿವಿಧ ದೇಶಗಳ ಖಾದ್ಯಗಳನ್ನು ಸವಿಯಬೇಕು ಎಂಬ ಆಸೆ ಖಾದ್ಯಪ್ರಿಯರಿಗೆ ಬರುವುದು ಕಾಮನ್. ಅಂತಹ ಒಂದು ಅಪರೂಪದ ಅವಕಾಶವನ್ನು ಮಂಗಳೂರಿನ ಪ್ರಸಿದ್ಧ ಹೋಟೆಲ್ ಗೋಲ್ಡ್‌ಫಿಂಚ್ ಒದಗಿಸುತ್ತಿದೆ. ಹೌದು ಹೋಟೆಲ್ ಗೋಲ್ಡ್‌ಫಿಂಚ್‌ನ ’ಕಬಾಬ್ ಸ್ಟುಡಿಯೋ’ದಲ್ಲಿ ಇಂಡೋ ಚೈನೀಸ್ ಫುಡ್ ಫೆಸ್ಟಿವಲ್ ನಡೆಯುತ್ತಿದೆ. ವೆರೈಟಿ ಫುಡ್‌ಪ್ರಿಯರ ನಾಲಿಗೆಯ ರುಚಿಯನ್ನು ತಣಿಸಲು ವಿವಿಧ ಬಗೆಯ ಫುಡ್ ಐಟಂಗಳು ಕಾಯುತ್ತಿವೆ.

 ಪ್ರತೀದಿನ ಒಂದೇ ಬಗೆಯ ಆಹಾರವನ್ನು ಸೇವಿಸಿ ಬೇಸತ್ತಿರುವ ಮಂದೊಗೆ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ವಿವಿಧ ಬಗೆಯ, ವಿವಿಧ ದೇಶಗಳ ಟೇಸ್ಟೀ ಫುಡ್‌ಗಳನ್ನು ಟೇಸ್ಟ್ ಮಾಡಬೇಕು ಅಂತಾ ಅನಿಸುವುದು ಕಾಮನ್. ಅಂತಹ ಅಪರೂಪದ ಅವಕಾಶವೊಂದು ಮಂಗಳೂರಿನ ಪ್ರಸಿದ್ಧ ಹೋಟೆಲ್ ಗೋಲ್ಡ್‌ಫಿಂಚ್‌ನಲ್ಲಿ ಕಾಯುತ್ತಿದೆ. ಹೌದು, ಮಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್‌ನ ’ಕಬಾಬ್ ಸ್ಟುಡಿಯೋ’ದಲ್ಲಿ ಇಂಡೋ ಚೈನೀಸ್ ಫುಡ್ ಫೆಸ್ಟಿವಲ್‌ನ್ನು ಆಯೋಜಿಸಲಾಗಿದೆ. ಜುಲೈ 19ರಿಂದ ಈ ಫುಡ್ ಫೆಸ್ಟಿವಲ್ ಆರಂಭಗೊಂಡಿದ್ದು, 28ರವರೆಗೂ ನಡೆಯಲಿದೆ.

 ಇಂಡೋ ಚೈನೀಸ್ ಫುಡ್ ಫೆಸ್ಟಿವಲ್‌ನಲ್ಲಿ ಡ್ರ್ಯಾಗನ್ ರೋಲ್, ಲೆಮನ್ ಚಿಕನ್, ಪ್ರಾನ್ಸ್, ವಿವಿಧ ಬಗೆಯ ಸ್ಟಾಟರ್‌ಗಳು, ಚಿಕನ್‌ಸಲಾಡ್, ಎಗ್‌ಸಲಾಡ್, ಹೈದರಾಬಾದ್ ಬಿರಿಯಾನಿ, ನೀಲಗಿರಿ ಕೂರ್ಮ ಮಲಬಾರಿ ಫಿಶ್‌ಕರಿ, ಬಟರ್‌ಚಿಕನ್, ಚಿಕನ್ ಚಿಲಿ ಮಸ್ಟರ್ಡ್, ಪನಿರ್ ಚೆಟ್ಟಿನಾಡು, ವಿವಿಧ ಬಗೆಯ ಟಿಕ್ಕಾ, ಬಗೆಬಗೆಯ ಐಸ್ ಕ್ರೀಮ್ಸ್, ಸ್ವೀಟ್ಸ್, ಜೊತೆಗೆ ವಿವಿಧ ಬಗೆಯ ಚಾಟ್ಸ್ ಹೀಗೆ ವಿಭಿನ್ನ ರೀತಿಯ ಖಾದ್ಯಗಳು ಲಭ್ಯವಿದ್ದು ಗ್ರಾಹಕರ ಹೊಟ್ಟೆ ತಣಿಸಲಿವೆ. ಭಾರತದಾದ್ಯಂತ ಖ್ಯಾತಿಯನ್ನು ಪಡೆದಿರುವ ಆಹಾರ ಖಾದ್ಯಗಳ ಜೊತೆಗೆ, ಚೈನಿಸ್ ಮಾದರಿಯ ಖಾದ್ಯಗಳು ಖಾದ್ಯ ಪ್ರೀಯರನ್ನು ಮನಸೆಳೆಯುತ್ತಿದೆ.

ಇಂಡಿಯಾ ಮತ್ತು ಚೈನಿಸ್ ಶೈಲಿಯ ವಿಭಿನ್ನ ಖಾದ್ಯಗಳನ್ನು ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಫುಡ್ ಫೆಸ್ಟಿವಲ್‌ನ್ನು ಆಯೋಜನೆ ಮಾಡಿದ್ದೇವೆ. ಹೆಚ್ಚಿನ ಜನರು ಈ ಸದುಪಯೋಗವನ್ನು ಪಡೆದುಕೊಳ್ಳಬೇಕು ಎನ್ನುವುದು ರೆಸ್ಟೋರೆಂಟ್‌ನ ಫುಡ್ ಆಂಡ್ ಬಿವರೆಜ್ ಮ್ಯಾನೆಜರ್ ಪ್ರಸಾದ್ ಅವರ ಮಾತು.  ಇನ್ನು ಗ್ರಾಹಕರು ಕೂಡ ಫುಡ್‌ಫೆಸ್ಟಿವಲ್‌ಗೆ ಫುಲ್‌ಮಾರ್ಕ್ಸ್ ಕೊಡುತ್ತಿದ್ದು, ಜನರ ಮನಗೆಲ್ಲುವಲ್ಲಿ ಫುಡ್‌ಫೆಸ್ಟಿವಲ್ ಯಶಸ್ವಿಯಾಗಿದೆ. 

ಒಟ್ಟಿನಲ್ಲಿ ಇಂಡೋ-ಚೈನಿಸ್ ಫುಡ್ ಫೆಸ್ಟಿವಲ್‌ನಲ್ಲಿ ಬಾಯಿ ಚಪ್ಪರಿಸುವಂತಹ ರುಚಿ ರುಚಿಯಾದ ಖಾದ್ಯಗಳು, ವಿಭಿನ್ನ ಶೈಲಿಯ ಖಾದ್ಯಗಳು ಜನರನ್ನು ಕೈ ಬೀಸಿ ಕರೆಯುತ್ತಿದೆ. ಕರಾವಳಿಯ ಖಾದ್ಯಪ್ರಿಯತು ಕೂಡ ಈ ಫುಡ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿ ಬಾಯಿ ಚಪ್ಪರಿಸಿ, ವೆರೈಟಿ ಖಾದ್ಯಗಳನ್ನು ಸವಿಯಬಹುದು.

Related posts

Leave a Reply

Your email address will not be published. Required fields are marked *