Header Ads
Header Ads
Header Ads
Header Ads
Header Ads
Header Ads
Breaking News

ಕರಾವಳಿ ಕಡಲಕಿನಾರೆಯಲ್ಲಿ ಮಹಾಪ್ರವಾಹದ ತ್ಯಾಜ್ಯ!

ಪಶ್ಚಿಮಘಟ್ಟ ಸೇರಿದಂತೆ ಕರಾವಳಿಯುದ್ದಕ್ಕೂ ಒಂದು ವಾರಗಳಿಂದ ಆರ್ಭಟಿಸಿದ ಮಹಾಮಳೆ, ಪ್ರವಾಹವು ಕಳೆದ ಕೆಲವು ದಿನಗಳಿಂದ ಶಾಂತವಾಗಿದೆ. ಆದರೆ ಪ್ರವಾಹವು ಉಂಟುಮಾಡಿದ ಪರಿಣಾಮವು ಇನ್ನೂ ಜನರ ಮನಸ್ಸಿನಿಂದ ಮಾಸಿಲ್ಲ. ಭೀಕರ ನೆರೆಯ ತೀವ್ರತೆ ಎಷ್ಟಿತ್ತು ಅನ್ನೋದನ್ನು ನೋಡ್ಬೇಕಿದ್ರೆ ಕರಾವಳಿಯ ಕಡಲತೀರಕ್ಕೊಮ್ಮೆ ಭೇಟಿ ನೀಡಬೇಕು. ಅದ್ಯಾಕೆ ಅಂತಾ ಕೇಳೋದಿದ್ರೆ ಈ ರಿಪೋರ್ಟ್ ನೋಡಿ.

ಪಶ್ಚಿಮಘಟ್ಟ ಸೇರಿದಂತೆ ಕರಾವಳಿಯುದ್ದಕ್ಕೂ ಒಂದು ವಾರದಿಂದ ಆರ್ಭಟಿಸಿದ ಮಹಾಮಳೆಯು ಇದೀಗ ಸದ್ಯಕ್ಕೆ ಶಾಂತಗೊಂಡಿದೆ. ನದಿಗಳಲ್ಲಿ ಉಕ್ಕಿ ಹರಿಯುತ್ತಿದ್ದ ಪ್ರವಾಹವೂ ತಣ್ಣಗಾಗಿದೆ. ನದಿಗಳು ಏನೂ ನಡೆದೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಶಾಂತವಾಗಿ ಹರಿಯುತ್ತಿವೆ. ಆದರೆ ಕಳೆದ ವಾರ ಸಂಭವಿಸಿದ ಪ್ರಾಕೃತಿಕ ದುರಂತವು ಮಾತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದುಕೊಂಡಿವೆ. ಪ್ರಕೃತಿಯ ರೌದ್ರ ನರ್ತನ ಅದೆಷ್ಟು ರೌದ್ರವಾಗಿತ್ತು ಎನ್ನುವುದಕ್ಕೆ ಕರಾವಳಿಯ ಕಡಲ ತೀರಗಳು ಸಾಕ್ಷಿ ನುಡಿಯುತ್ತಿವೆ.

ಹೌದು, ಕರಾವಳಿಯ ಕಡಲ ತೀರವನ್ನು ಈಗ ಗಮನಿಸಿದರೆ ಎಲ್ಲೆಲ್ಲೂ ಕಾಣಸಿಗುವುದು ತ್ಯಾಜ್ಯಗಳ ಬೃಹತ್ ರಾಶಿ. ಇದರ ಜೊತೆಗೆ ಸತ್ತುಬಿದ್ದ ಪ್ರಾಣಿಗಳ ಮೃತದೇಹಗಳು, ಜೀವ ಇಲ್ಲದ ಹಾಗೂ ಜೀವ ಇರುವ ಹಾವುಗಳು. ಹೌದು. ಮಹಾಮಳೆಯಿಂದ ಹರಿದು ಬಂದ ನೆರೆಯಲ್ಲಿ ಪಶ್ಚಿಮಘಟ್ಟದಿಂದ ಈ ಬಾರಿ ದೊಡ್ಡದೊಡ್ಡ ಮರದ ದಿಣ್ಣೆಗಳು, ಬೃಹತ್ ಗಾತ್ರದ ಮರಗಳು, ಸಾಲುಸಾಲು ಬಿದಿರು ರಾಶಿಗಳು, ಸಾವಿರಾರು ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ಬಾಟಲಿಗಳು ತೇಲಿಬಂದಿವೆ. ನೂರಾರು ಟನ್ ತ್ಯಾಜ್ಯಗಳು ಕಡಲಗರ್ಭದೊಳಗೆ ಸೇರಿ ಈಗ ದಡವನ್ನು ಸೇರಿಕೊಂಡಿವೆ. ಅಳಿವೆ ಬಾಗಿಲಿನಿಂದ ಹಿಡಿದು ಸುಮಾರು 7 ಕಿಮೀ ದೂರದ ಪಣಂಬೂರು ಬೀಚ್‍ನ ಉದ್ದಗಲಕ್ಕೂ ತ್ಯಾಜ್ಯದ ರಾಶಿಗಳು ಬಂದು ಬಿದ್ದಿವೆ. ಎಲ್ಲೆಲ್ಲೂ ತ್ಯಾಜ್ಯಗಳೇ ತುಂಬಿಕೊಂಡಿದ್ದು, ಮರಳಿನ ಮೇಲೆ ಕಾಲಿಡಲು ಪ್ರವಾಸಿಗರು ಭಯಪಡುವಂತಾಗಿದೆ.ಪ್ರತೀವರ್ಷ ಮಳೆಗಾಲದಲ್ಲಿ ಕಡಲತೀರಕ್ಕೆ ತ್ಯಾಜ್ಯಗಳು ಬರುವುದು ಸಾಮಾನ್ಯ. ಆದರೆ ಈ ಬಾರಿ ಇದು 5 ಪಟ್ಟು ಹೆಚ್ಚಳವಾಗಿದೆ. ಮನುಷ್ಯರು ಪ್ರಕೃತಿಗೆ ಕೊಟ್ಟಿದ್ದನ್ನು ಒಂದು ಚೂರೂ ಇರಿಸಿಕೊಳ್ಳದ ಪ್ರಕೃತಿಯು ಎಲ್ಲವನ್ನೂ ಬಡ್ಡಿಸಮೇತ ವಾಪಸ್ ಕೊಟ್ಟಿದೆ ಎನ್ನುವ ಮಾತುಗಳು ಕೂಡ ಈಗ ಕೇಳಿಬರುತ್ತಿವೆ. ಪ್ರಕೃತಿಯು ಮನುಷ್ಯನ ವಿರುದ್ಧ ತಿರುಗಿಬಿದ್ದರೆ ಪರಿಸ್ಥಿತಿ ಹೇಗಿರಬಹುದೆಂಬುದಕ್ಕೆ ಈ ವರ್ಷದ ಮಹಾಮಳೆ, ಪ್ರವಾಹವೇ ಸಾಕ್ಷಿ ನುಡಿಯುತ್ತಿದೆ. ಇನ್ನಾದರೂ ಪ್ರಕೃತಿಯಿಂದ ಪಾಠ ಕಲಿಯದೆ ಇದ್ದರೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದರಲ್ಲಿ ಯಾವುದೇ ಡೌಟಿಲ್ಲ.

Related posts

Leave a Reply

Your email address will not be published. Required fields are marked *