Header Ads
Breaking News

ಕರಿಂಜೆಯಲ್ಲಿ ಕೊರೋನಾ ನಿಗಾ ಕೇಂದ್ರ ಬೇಡ, ರಾಜಕೀಯ ರಹಿತ ಹಿತರಕ್ಷಣಾ ವೇದಿಕೆ ಸ್ಥಾಪನೆಯಾಗಲಿ; ಮುಕ್ತಾನಂದ ಸ್ವಾಮೀಜಿ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕರಿಂಜೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟವು ಈ ಹಿಂದೆಯೇ ನಿರ್ಮಾಣವಾಗಿದ್ದು ಅದು ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿಲ್ಲ. ಇದೀಗ ಈ ಪ್ರದೇಶದಲ್ಲಿ ಖಾಸಗಿ ಕಟ್ಟಡವೊಂದರಲ್ಲಿ ಕೊರೋನಾ ವೈರಸ್ ಸೋಂಕಿತ ಶಂಕಿತರನ್ನು ಇರಿಸಲು ನಿಗಾ ಕೇಂದ್ರ ಬೇಡ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮತ್ತು ಪರಿಸರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಸಕ್ರೀಯವಾಗಿ ಕಾರ್ಯಚರಣೆ ನಡೆಸಲು ಜಾತಿ ಬೇಧವಿಲ್ಲದ, ರಾಜಕೀಯ ರಹಿತವಾದ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಬೇಕಾಗಿದೆ ಎಂದು ಕರಿಂಜೆ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಸಲಹೆ ನೀಡಿದರು.

ಅವರು ಜಿಲ್ಲಾಡಳಿತವು ಇಲ್ಲಿನ ಪುರಸಭಾ ವ್ಯಾಪ್ತಿಯ ಕರಿಂಜೆಯ ಸಿದ್ದತೆ ನಡೆಸುತ್ತಿದ್ದು ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಭಾನುವಾರ ನಡೆಸಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕರಿಂಜೆಯಲ್ಲಿ ಈಗಾಗಲೇ ಘನತ್ಯಾಜ್ಯ ಘಟವನ್ನು ನಿರ್ಮಿಸಿ ಪೇಟೆಯ ಘನತ್ಯಾಜ್ಯವನ್ನು ರಾಶಿ ತಂದು ಹಾಕಲಾಗುತ್ತಿದ್ದೆ ಅಲ್ಲಿ ಅಸಮರ್ಪಕ ರೀತಿಯಲ್ಲಿ ಕಾರ್ಯಗಳು ನಡೆಯುತ್ತಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ಇದರಿಂದಲೇ ಕೊರೋನಾ ಅಥವಾ ಇತರ ಕಾಯಿಲೆಗಳು ಬರಬಹುದು.

ಇದೀಗ ಮತ್ತೆ ಇಲ್ಲಿ ಕೊರೋನಾ ಘಟಕಗಳನ್ನು ತೆರೆದು ಇಲ್ಲಿನ ಜನರಿಗೆ ತೊಂದರೆ ನೀಡುವುದು ಬೇಡ. ಮುಂದೆಯೂ ಇಂತಹ ಬೇರೆ ಘಟಕಗಳೂ ಬರಬಾರದು ಅದಕ್ಕಾಗಿಯೇ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಬೇಕೆಂದರು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ಗ್ರಾಮಸ್ಥರಿಗೆ ಸಾಂತ್ವಾನ ಹೇಳಿ ಜಾಗೃತಿಯನ್ನು ನೀಡಿ ಕಾರ್ಯಪ್ರವೃತರಾಗಬೇಕಾಗಿತ್ತು. ಆದರೆ ಇದ್ಯಾವುದನ್ನೂ ಮಾಡದೆ ಗೊಂದಲವನ್ನು ನಿರ್ಮಿಸಿದ್ದಾರೆ.

ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಗ್ರಾಮಸ್ಥರ ಜೊತೆ ಮಾತನಾಡಿ ನಿಗಾ ಕೇಂದ್ರವನ್ನು ಈ ಪ್ರದೇಶದಲ್ಲಿ ತೆರೆಯಲು ಬಿಡುವುದಿಲ್ಲವೆಂದು ಭರವಸೆಯನ್ನು ನೀಡಿದರು. ಪುರಸಭಾ ವಾರ್ಡ್ ಸದಸ್ಯರಾದ ಜಯಶ್ರೀ, ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್, ಕೊರೊನಾ ಸೋಂಕಿತರ ನಿಗಾ ಕೇಂದ್ರ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿರುವ ಕಟ್ಟಡದ ಮಾಲಕ ಜೆರಾಲ್ಡ್ ಕ್ರಾಸ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *