Header Ads
Breaking News

ಕರಿಯನಂಗಡಿ-ಕಾಂತಾವರ ಕ್ರಾಸ್ ರೋಡ್ ಅಗಲೀಕರಣಕ್ಕೆ ಶಿಲಾನ್ಯಾಸ; 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಸ್ತೆ

ಮೂಡುಬಿದಿರೆ : ಬೆಳುವಾಯಿ ಗ್ರಾ.ಪಂ. ವ್ಯಾಪ್ತಿಯ ಕರಿಯನಂಗಡಿ ಜಂಕ್ಷನ್‍ನಿಂದ ಕಾಂತಾವರ ಕ್ರಾಸ್ ಸ್ವಾಗತ ದ್ವಾರದವರೆಗೆ ರೂ. 1.20 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಮೂಲಕ ನಡೆಸಲಾಗುವ ರಸ್ತೆ ಅಗಲಗೊಳಿಸುವ ಕಾಮಗಾರಿಗೆ ಶಾಸಕ ಉಮಾನಾಥ ಎ. ಕೋಟ್ಯಾನ್ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾತನಾಡಿದ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಾದ್ಯಂತ ಅಗತ್ಯವಿರುವಲ್ಲೆಲ್ಲ ಗ್ರಾಮೀಣ ರಸ್ತೆಗಳ ವಿಸ್ತರಣೆಯನ್ನು ಆದ್ಯತೆ ಮೇರೆಗೆ ನಡೆಸಲಾಗುತ್ತಿದೆ. ರಸ್ತೆಗಳ ಅಭಿವೃದ್ಧಿಯಿಂದ ಜನರು ಪಡೆಯುವ ಪ್ರಯೋಜನದಿಂದ ಊರು ಅಭಿವೃದ್ಧಿ ಹೊಂದಲು ಸಾಧ್ಯ’ ಎಂದು ಅವರು ತಿಳಿಸಿದರು. ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಸೋಮನಾಥ ಕೋಟ್ಯಾನ್, ಉಪಾಧ್ಯಕ್ಷೆ ರಮಣಿ ಆಳ್ವ, ವಾರ್ಡ್ ಸದಸ್ಯರಾದ ಸುಶೀಲಾ, ಅನಿತಾ, ಲತಾ ಜೈನ್, ಶಿವರಾಮ ಹೆಗ್ಡೆ, ಸೌಮ್ಯಾ ನಾಯ್ಕ್, ಬೆಳುವಾಯಿ ಗ್ರಾಮ ಸಮಿತಿ ಅಧ್ಯಕ್ಷ ಹರ್ಷವರ್ಮ ಹೆಗ್ಡೆ, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *