Header Ads
Header Ads
Breaking News

ಗಣೇಶ ಚತುರ್ಥಿಯ ಪ್ರಯುಕ್ತ ಕರೆಂಕಿ‌ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನಿಂದ ಆಟೋಟ ಸ್ಪರ್ಧೆ

ಬಂಟ್ವಾಳ: ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸಮಾಜ ಸೇವೆಗಾಗಿ ಕೊಡುವ ರಾಜ್ಯಮಟ್ಟದ ಕರೆಂಕಿ ಶ್ರೀ ಪ್ರಶಸ್ತಿಗೆ ಸಿದ್ದಕಟ್ಟೆಯ ಜವನೆರ್ ತುಡರ್ ತಂಡ ಪಾತ್ರವಾಗಿದೆ. ಕರೆಂಕಿಯಲ್ಲಿ ಗುರುವಾರ ರಾತ್ರಿ ಶ್ರೀ ಗಣೇಶ ಚತುರ್ಥಿಯ ಪ್ರಯುಕ್ತ ನಡೆದ 11ನೇ ವರ್ಷದ ಆಟೋಟ ಸ್ಪರ್ಧೇಗಳ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಇಂದು ರಾಜ್ಯದ್ಯಂತ ಮನೆಮಾತಾಗಿದೆ. ಬಡವರ ಮಕ್ಕಳಿಗೆ ಸರಕಾರಿ ಶಾಲೆ ಉಳಿಸುವ ಆಂದೋಲನದಡಿ ಕ್ಲಬ್‌ನ ಸಾಧನೆಯನ್ನು ರಾಜ್ಯ ಗುರುತಿಸಿದೆ ಎಂದರು. ವೇದಿಕೆಯಲ್ಲಿ ಪ್ರಮುಖರಾದ ಪೂವಫ್ಪ ಮೆಂಡನ್, ರಾಮಚಂದ್ರ ಕರೆಂಕಿ, ವಿಠಲ ಡಿ, ಆನಂದ, ದಿನೇಶ್ ಸುವರ್ಣ ರಾಯಿ. ಸಂತೋಷ್ ರಾಯಿಬೆಟ್ಟು, ಶೇಖರ ಅಂಚನ್, ಪುರುಷೋತ್ತಮ ಅಂಚನ್ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದ ಅಂಗವಾಗಿ ಕೆಸರುಗಡ್ಡೆಯ ಆಟ, ಮಡಿಕೆ ಹೊಡೆತ ಮೊದಲಾದ ಕಾರ್ಯಕ್ರಮಗಳು ನಡೆದವು.

Related posts

Leave a Reply