Header Ads
Header Ads
Breaking News

ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘ.ಯುವ ಘಟಕದ ಉದ್ಘಾಟನಾ ಸಮಾರಂಭ.ಕದ್ರಿಯ ಗೋರಕ್ಷಕನಾಥ ಸಭಾಂಗಣದಲ್ಲಿ ಕಾರ್ಯಕ್ರಮ.

ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಯುವ ಘಟಕದ ಉದ್ಘಾಟನೆಯು ಮಂಗಳೂರಿನ ಗೋರಕ್ಷನಾಥ ಸಭಾಭವನದಲ್ಲಿ ನಡೆಯಿತು.
ಮಂಗಳೂರಿನ ಕದ್ರಿಯ ಗೋರಕ್ಷಕನಾಥ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಧಾರ್ಮಿಕ ಕ್ಷೇತ್ರದಲ್ಲಿ ಸಮಾಜದ ಕೊಡುಗೆ ಅಪಾರ. ವಿವಿಧತೆಗಳಲ್ಲಿ ಏಕತೆ ಎಂಬ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಯುವ ಸಮುದಾಯಕ್ಕೆ ತೀಳಿಯಪಡಿಸಬೇಕು ಎಂದು ಹೇಳಿದರು.

ಆನಂತರ ಸಂಘದ ಮಾಜಿ ಅಧ್ಯಕ್ಷ ಹೆಚ್. ಕೆ ಪುರುಷೋತ್ತಮ ಅವರು ಮಾತನಾಡಿ, ಕರ್ನಾಟಕ ಜೋಗಿ ಸಮುದಾಯ 49 ವರ್ಷದಿಂದ ಬೆಳೆದು ಬಂದ ಬಗೆ ನಿಮಗೆಲ್ಲಾ ಗೊತ್ತಿರುವಂತದ್ದೇ. ಈ ಸಮುದಾಯ ಉಳಿಯಲು ಹಿರಿಯರ ಅಪಾರವಾದ ಶ್ರಮವಿದೆ. ಹಾಗೆಯೇ ಇದು ಇನ್ನೂ ಮುಂದುವರಿಯಬೇಕಾದರೆ ಇಂದಿನ ಯುವಕರ ಪೂರ್ಣ ಕಾರ್ಯಕ್ರಮದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಹಾಗೂ ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ರವರನ್ನು ಸನ್ಮಾನಿಸಲಾಯಿತು. ಹಾಗೂ ಲಯನ್ ಕಿಶೋರ್ ಡಿ ಶೆಟ್ಟಿಯವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ಯುವ ಘಟಕದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಪ್ರತಿಜ್ಞಾವಿಧಿಯನ್ನು ವಚನವನ್ನು ಡಾ. ಪಿ. ಕೇಶವನಾಥ್‌ರವರು ಭೋದಿಸಿದರು.ಇನ್ನು ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕಿರಣ್ ಜೋಗಿ, ಮಹಿಳಾ ಘಟಕದ ಸದಸ್ಯೆ ಅಮಿತ ಸಂಜೀವ, ಗಂಗಾಧರ್ ಬಿ, ಸಚ್ಚಿಂದ್ರನಾಥ್ ಕೆ, ದೀಕ್ಷಿತ್ ಕೂಟತ್ತಜೆ, ರಂಜಿತ್ ಕದ್ರಿ, ಚರಣ್ ಜೋಗಿ, ಜಸ್ವಂತ್ ಜೋಗಿ ಉಪಸ್ಥಿತರಿದ್ದರು.

Related posts

Leave a Reply