Header Ads
Breaking News

ಕರ್ನಾಟಕ ರಿಕ್ಷಾ ಚಾಲಕ, ಮಾಲಕರ ಸಂಘದ ದಶಮಾನೋತ್ಸವ : ಪುತ್ತೂರಿನ ಜೈನ ಭವನದಲ್ಲಿ ಆಯೋಜನೆ

ಕರ್ನಾಟಕ ರಿಕ್ಷಾ ಚಾಲಕ, ಮಾಲಕರ ಸಂಘದ ದಶಮಾನೋತ್ಸವ ಮತ್ತು ಕಟ್ಟಡ ಕಾರ್ಮಿಕರ ವಾರ್ಷಿಕ ಮಹಾಸಭೆಯು ಪುತ್ತೂರಿನ ಜೈನ ಭವನದಲ್ಲಿ ನಡೆಯಿತು. ದರ್ಬೆಯಿಂದ ಜೈನ ಭವನದ ತನಕ ಆಟೋ ರಿಕ್ಷಾಗಳ ಮೆರವಣಿಗೆ ನಡೆಯಿತು. ಮೆರವಣಿಗೆಯನ್ನು ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಉದ್ಘಾಟಿಸಿದರು.ಕಾರ್ಯಕ್ರಮವನ್ನು ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ದೇವಾನಂದ ದೀಪಬೆಳಗಿಸಿ ಉದ್ಘಾಟಿಸಿದರು, ನಂತರ ಮಾತನಾಡಿದ ಅವರು ರಿಕ್ಷಾ ಚಾಲಕರು ತಮ್ಮ ಚಾಲನೆಯ ಸಂದರ್ಭದಲ್ಲಿ ವಾಹನದ ಇನ್ಸುರೆನ್ಸ್, ಪರವಾನಿಗೆ ಕಡ್ಡಾಯವಾಗಿ ಇಟ್ಟುಕೊಳ್ಳಬೇಕು. ದಾಖಲಾತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷರೂ, ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಕಾನೂನು ಸಲಹೆಗಾರರೂ ಆಗಿರುವ ಬಿ.ಪುರಂದರ ಭಟ್ ಅವರು ಮಾತನಾಡಿ ನಮ್ಮ ಉದ್ದೇಶ ಹಣದ ಲೆಕ್ಕಾಚಾರವಲ್ಲ. ಎಷ್ಟು ಸಾಧ್ಯವಿದೆಯೋ ಅಷ್ಟು ಸಾಮಾಜಿಕ ಕೆಲಸ ನಿಸ್ವಾರ್ಥವಾಗಿ ನಡೆಯುತ್ತದೆ ಎಂದ ಅವರು ಕಾಯಕವೆ ಕೈಲಾಸವೆಂದು ದುಡಿಯುವ ನಮ್ಮ ಸಂಘಟನೆ ಅನೇಕ ಉತ್ತಮ ಕೆಲಸ ಮಾಡಿದೆ. ಇದು ವೈಚಾರಿಕೆಯಿಂದ ನಡೆದಿದೆ ಎಂದ ಅವರು ವೈಚಾರಿಕತೆಯಿಂದ ಮಾತ್ರ ಹೃದಯವಂತಿಕೆ ದೇಶವನ್ನು ಕಟ್ಟಲು ಸಾಧ್ಯವಿದೆ ಎಂದು ಹೇಳಿದರು.ಹಿರಿಯ ಕಾರ್ಮಿಕ ನಿರೀಕ್ಷಕ ರಾಮಚಂದ್ರ, ಸಂಘದ ಕಾನೂನು ಸಲಹೆಗಾರ ನ್ಯಾಯವಾದಿ ದಿವ್ಯರಾಜ್ ಹೆಗ್ಡೆ, ಪುತ್ತೂರು ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್‍ಸ್‌ನ ಅಧ್ಯಕ್ಷ ವಿನ್ಯಾಸ್ ಕನ್‌ಸ್ಟ್ರಕ್ಷನ್ ನ ಕಿಶೋರ್ ಕುಮಾರ್, ಜಿಲ್ಲಾ ಆಟೋ ರಿಕ್ಷಾ ಚಾಲಕರ ಸಂಘದ ಉಪಾಧ್ಯಕ್ಷ ಪ್ರಕಾಶ್ ವಿ.ಎನ್, ಕರ್ನಾಟಕ ರಿಕ್ಷಾ ಚಾಲಕ ಮಾಲಕ ಸಂಘದ ಕಾರ್ಯಾಧ್ಯಕ್ಷ ಜಯರಾಮ ಕುಲಾಲ್ ಅವರು ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಗಿರೀಶ್ ನಾಯ್ಕ ಉಪಸ್ಥಿತರಿದ್ದರು.ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ದಶಮಾನೋತ್ಸವ ಸಲುವಾಗಿ ಗಣ್ಯರನ್ನು ಸನ್ಮಾನಿಸಲಾಯಿತು. ಜೊತೆಗೆ ಸಂಘದಲ್ಲಿ ಸಕ್ರೀಯರಾಗಿ ಸಹಕಾರ ನೀಡಿದವರನ್ನು ಗೌರವಿಸಲಾಯಿತು.

Related posts

Leave a Reply

Your email address will not be published. Required fields are marked *