Breaking News

ಕಲ್ಲಡ್ಕ ಶಾಲೆ ಪರ ಜನರ್ದಾನ ಪೂಜಾರಿ ಬ್ಯಾಟಿಂಗ್ ಅನುದಾನ ರದ್ದು ಮಾಡಿರುವುದು ಸರಿಯಲ್ಲ ಮಂಗಳೂರಿನಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ

ಆಂಕರ್ : ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತಕ್ಕೊಳಪಟ್ಟ ಎರಡು ಶಾಲೆಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದ ದೇವಸ್ಥಾನದಿಂದ ನೀಡಲಾಗುತ್ತಿದ್ದ ಅನುದಾನವನ್ನು ರದ್ದುಗೊಳಿಸಿರುವುದಕ್ಕೆ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಅವ್ರು, ಮಕ್ಕಳ ಊಟವನ್ನ ಸರ್ಕಾರ ಕಸಿದುಕೊಂಡಿದೆ. ಮುಖ್ಯಮಂತ್ರಿ ಸಿ‌ಎಂ ಸಿದ್ದರಾಮಯ್ಯ ಹಾಗೂ ಸಚಿವ ರಮಾನಾಥ್ ರೈಗೆ ಎನಾದ್ರೂ ಶನಿ ಹಿಡಿದಿದ್ಯಾ ಎಂದು ಪ್ರಶ್ನಿಸಿದರು. ಇನ್ನೂ ರೈ ಮಾಡಿದ ತಪ್ಪನ್ನು ದೇವರೂ ಕ್ಷಮಿಸೋದಿಲ್ಲ, ಸರ್ಕಾರ ಅನುದಾನದ ನಿಷೇಧದ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕೆದರು.

Related posts

Leave a Reply