Header Ads
Breaking News

ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದಲ್ಲಿ ರಾಜ್ಯ ಮಟ್ಟದ ಕರಾಟೆಪಟುಗಳಿಗೆ ಅಭಿನಂದನೆ

ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ ಹಾಗೂ ವೆಸ್ಟರ್ನ್ ಸಂಸ್ಥೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಒಟ್ಟು63ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಗೌರವ ಕಾರ್ಯಕ್ರಮ ಬಿಸಿರೋಡು ಪೋಲೀಸ್ ಲೇನ್ ಶ್ರೀ ಅನ್ನಪೂರ್ಣೇಶ್ವರಿ ದೇವಿದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕಾನ್ ರ್‍ಯೂ ಆರ್.ವಿ.ಟೈಗರ್ ಸ್ಪೋರ್ಟ್ಸ್ ಕರಾಟೆ ಕರ್ನಾಟಕ ಸಂಸ್ಥೆಯ ಸಹ ತರಬೇತಿ ಕೇಂದ್ರ ವಾದ ಬಿಸಿರೋಡಿನ ಅನ್ನಪೂರ್ಣೇಶ್ವರಿ ಕರಾಟೆ ಟ್ರೈನಿಂಗ್ ಸೆಂಟರ್‌ನ 63 ವಿದ್ಯಾರ್ಥಿಗಳು ಸ್ಫರ್ಧೆಯಲ್ಲಿ ಭಾಗವಹಸಿ ವಿವಿಧ ವಿಭಾಗದಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಈ 63ವಿದ್ಯಾರ್ಥಿಗಳಿಗೆ ಕರಾಟೆಯ ರಾಷ್ಟ್ರೀಯ ತೀರ್ಪುಗಾರರಾದ ಶಿಹಾನ್ ವಸಂತ್ ಕೆ.ಬಂಗೇರ ಪಾರೆಂಕಿ ತರಬೇತಿ ನೀಡಿದ್ದಾರೆ. ವಿಜೇತ ಕರಾಟೆ ಪಟುಗಳಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಬಂಟ್ವಾಳದ ವಿಎನ್‌ಆರ್ ಗೋಲ್ಡ್‌ನ ಮಾಲಕ ಸ್ವಣೋದ್ಯಮಿ ನಾಗೇಂದ್ರ ಬಾಳಿಗಾ ಅವರು ಮಾತನಾಡಿ ಕ್ರೀಡೆಯಲ್ಲಿ ಮುಖ್ಯವಾಗಿ ಬೇಕಾಗಿರುವುದು ಮಾನಸಿಕ ಸದೃಡತೆ. ಧೈರ್ಯ, ಶೃದ್ದೆ, ಏಕಾಗ್ರತೆ , ಕಲಿಯುವ ಹುಮ್ಮಸು ಇದ್ದಾಗ ಯಶಸ್ಸು ಪಡೆಯಲು ಸಾಧ್ಯವಿದೆ ಎಂದರು. ಅನ್ನಪೂರ್ಣೇಶ್ವರಿ ದೇವಿ ದೇವಸ್ಥಾನದ ಆಡಳಿತ ಮೋಕ್ತೇಸರ ಸೇಸಪ್ಪ ಕೋಟ್ಯಾನ್, ಉದ್ಯಮಿಗಳಾದ ಸಂದೀಪ್ ಬಂಟ್ವಾಳ, ಹೇಮಂತ್ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳ ಪಾಲಕರು ಪೋಷಕರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *