
ಕಸ್ತೂರಿ ರಂಗನ್ ವರದಿ ಜಾರಿಗೆ ಬಂದರೆ ಎಲ್ಲಾ ಗ್ರಾಮಗಳಲ್ಲಿ ಕೂಡ ಧರಣಿ ನಡೆಸಿ ಮನವಿ ಸಲ್ಲಿಸಲಿದ್ದೇವೆ, ಮಲೆನಾಡು ಹಿತರಕ್ಷಣಾ ಸಂಚಾಲಕ ಕಿಶೋರ್ ಶಿರಾಡಿ,ಅವರು ಕಳೆಂಜ ಗ್ರಾಮ ಪಂಚಾಯಿತಿನ ಎದುರಿನಲ್ಲಿ ಧರಣಿ ನಡೆಸಿ ಮನವಿ ಸಲ್ಲಿಸಿ ಮಾತನಾಡಿ ಈಗಾಗಲೇ ಕಳೆಂಜ ಗ್ರಾಮ ಪಂಚಾಯತಿನಲ್ಲಿ ಮನವಿ ಸಲ್ಲಿಸಿದ್ದೇವೆ, ಇದರ ಬಳಿಕ ಉಳಿದ 16 ಗ್ರಾಮದಲ್ಲಿ ಕೂಡ ಧರಣಿ ನಡೆಸಿ ಮನವಿ ಸಲ್ಲಿಸುತ್ತೇವೆ, ಕಸ್ತೂರಿರಂಗನ್ ವರದಿ ಜಾರಿಗೆ ಬಂದರೆ ಗ್ರಾಮಗಳು ಪೂರ್ತಿ ಅರಣ್ಯಗಳ ಆಗುವ ಸಂಭವವಿದೆ, ಅಲ್ಲದೆ ಮೂಲಭೂತ ಸೌಕರ್ಯವಿಲ್ಲದೆ ಒಕ್ಕಲು ಎದ್ದು ಹೋಗುವ ಪರಿಸ್ಥಿತಿ ಎದುರಾಗಲಿದೆ ಎಂದರು.ಧರಣಿ ಸತ್ಯಾಗ್ರಹದಲ್ಲಿ ಮಲೆನಾಡು ಹಿತ ರಕ್ಷಣಾ ವೇದಿಕೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು,