Header Ads
Header Ads
Header Ads
Header Ads
Header Ads
Header Ads
Breaking News

ಕಾಂಗ್ರೆಸ್ ನಾಯಕರಿಗೆ ಅಧಿಕಾರಿಗಳಿಂದ ಕಿರುಕುಳ: ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ಹೇಳಿಕೆ

ಬಿಜೆಪಿಯು ಯಾವುದೇ ಪ್ರತಿಪಕ್ಷಗಳು ಉಳಿಯಲೇಬಾರದು ಎಂಬ ಉದ್ದೇಶದಿಂದ ಇಡಿ ಅಧಿಕಾರಿಗಳ ಮೂಲಕ ರಾಜಕಾರಣಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸೂರಜ್ ಹೆಗ್ಡೆ ಹೇಳಿದ್ರು. ಡಿಸಿಸಿ ಅಧ್ಯಕ್ಷ ಬದಲಾವಣೆಯ ವೀಕ್ಷಣೆ ವಿವರಣೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ, ಸುದ್ಧಿಗಾರದೊಂದಿಗೆ ಮಾತನಾಡಿದ್ರು, ಕಾಂಗ್ರೆಸ್ ಮುಖಂಡ ಡಿಕೆಶಿಯವರು ಎಲ್ಲಾ ಸಮನ್ಸ್‌ಗಳಿಗೂ ಹಾಜರಾಗಿದ್ದಾರೆ. ಆದ್ರೆ ಈವರೆಗೆ ಇಡಿಯವರು ಎಡಿಆರ್ ಯಾಕೆ ಕೊಟ್ಟಿಲ್ಲ, ಎಫ್‌ಐಆರ್ ಯಾಕೆ ದಾಖಲಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ್ರು. ರಾಜ್ಯದ ನೆರೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಸ್ಪಂದನೆ ನೀಡುತ್ತಿಲ್ಲ, ಮಾತ್ರವಲ್ಲದೇ ರಾಜ್ಯ ಸರ್ಕಾರ ಕೂಡ ನೆರೆ ಪರಿಹಾರದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ್ರು. ಇನ್ನು ಸದ್ಯದಲ್ಲೇ ಡಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ. ಪಕ್ಷದ ಮುಖಂಡರ, ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಪಕ್ಷದ ವರಿಷ್ಠರಿಗೆ ಸಲ್ಲಿಸಲಾಗುವುದು ಅಂತಾ ತಿಳಿಸಿದ್ರು.

Related posts

Leave a Reply

Your email address will not be published. Required fields are marked *