Breaking News

ಕಾನೂನು ಬಾಹಿರ ಚಟುವಟಿಕೆಗೆ ಅವಕಾಶವಿಲ್ಲ ಪ್ರತೀ ವಾರಕ್ಕೊಮ್ಮೆ ಸಾರ್ವಜನಿಕರೊಂದಿಗೆ ಫೋನ್ ಇನ್ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿ ಸಂಜೀವ್ ಪಾಟಿಲ್ ಮಾಹಿತಿ

 

 

ಅಧಿಕಾರ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆಗೆ ಅವಕಾಶ ನೀಡಲ್ಲ. ಮಟ್ಕಾ, ಗಾಂಜಾದಂತಹ ಯಾವುದೇ ಕಾನೂನು ಬಾಹಿರ ಕೃತ್ಯ ನಿಯಂತ್ರಿಸಲಾಗುವುದು. ಈ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪೊಲೀಸರೂ ಶಾಮೀಲಾಗಿದ್ದಲ್ಲಿ ಅವರ ಮೇಲೂ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಧರ್ಮ, ಜಾತಿ ಅಥವಾ ಪಕ್ಷದವರು ಕಾನೂನು ಕೈಗೆತ್ತಿಕೊಂಡರೆ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು. ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೆಚ್ಚಿನ ಒತ್ತನ್ನು ನೀಡಲಾಗುವುದು ಅದಕ್ಕಾಗಿ ಪ್ರತೀ ವಾರಕ್ಕೊಂದು ದಿನ ಸಾರ್ವಜನಿಕರೊಂದಿಗೆ ಫೋನ್ ಸಂಭಾಷಣೆ ನಡೆಸಿ ದೂರನ್ನು, ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ನನ್ನ ಉಪಸ್ಥಿಯಿಲ್ಲದಿದ್ದರೂ ಸಾರ್ವಜನಿಕರೊಂದಿಗೆ ಫೋನ್ ಸಂಪರ್ಕ ಮುಂದುವರೆಯಲಿದೆ ಎಂದರು.
ಹಿಂದಿನ ಎಸ್ಪಿಯಾಗಿದ್ದ ಕೆ.ಟಿ ಬಾಲಕೃಷ್ಣ ರಾಜ್ಯ ಗೃಹರಕ್ಷಕದಳ ಸೂಪರಿಂಟೆಂಟೆಂಟ್ ಆಗಿ ವರ್ಗಾವಣೆಗೊಂಡ ಬಳಿಕ ಸಂಜೀವ ಎಂ.ಪಾಟೀಲ್ ಎಸ್ಪಿಯಾಗಿ ಇಂದು ಅಧಿಕಾರ ಸ್ವೀಕರಿಸಿದರು.
ಡಾ.ಸಂಜೀವ ಎಂ ಪಾಟೀಲ್ ಮಂಗಳೂರಿನಲ್ಲಿ ಈ ಹಿಂದೆ ಅಪರಾಧ ಮತ್ತು ಟ್ರಾಫಿಕ್ ವಿಭಾಗದಲ್ಲಿ ಡಿಸಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು ಇತ್ತೀಚೆಗೆ ಕೇಂದ್ರ ಗೃಹಸಚಿವಾಲಯ ಕರ್ನಾಟಕದ ೨೩ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ದರ್ಜೆಗೆ ಭಡ್ತಿ ನೀಡಿತ್ತು ಈ ೨೩ಮಂದಿ ಪೊಲೀಸ್ ಅಧಿಕಾರಿಗಳಲ್ಲಿ ಸಂಜೀವ ಎಂ ಪಾಟೀಲ್ ಖಡಕ್ ಅಧಿಕಾರಿಯಾಗಿದ್ದರು.
೨೦೧೩ರಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೂ ಸಂಜೀವ ಎಂ.ಪಾಟೀಲ್ ಭಾಜನರಾಗಿದ್ದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply