Header Ads
Breaking News

ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸಮಾರಂಭ

ಸಮಾಜಕ್ಕೆ ಸೂಕ್ತ ಕಾಲದಲ್ಲಿ ಸಮರ್ಪಕ ಮಾಹಿತಿಯನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿರುವ ಪತ್ರಕರ್ತರು ಮಹತ್ವದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆ ನಿಟ್ಟಿನಲ್ಲಿ ಪೊಲೀಸ್  ರು ಮತ್ತು ಪತ್ರಕರ್ತರು ಸಮಾಜದ ಪ್ರತಿಬಿಂಬದಂತೆ ಕರ್ತವ್ಯ ನಿಭಾಯಿಸಬೇಕಿದೆ. ಪೊಲೀಸ್  ರು ಮತ್ತು ಪತ್ರಕರ್ತರು ಸ್ವಾಸ್ಥ ್ಯ ಸಮಾಜ ನಿರ್ಮಾಣದಲ್ಲಿ ಪ್ರಮುಖರು ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್  ಅಧೀಕ್ಷಕ ಕುಮಾರ ಚಂದ್ರ ಹೇಳಿದರು. ಅವರು ಕಟಪಾಡಿ ಕೃಷ್ಣಾರ್ಸಿ ಸಭಾಗೃಹದಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಕ್ರೀಡೋತ್ಸವದ ಬಹುಮಾನ ವಿತರಣೆ ಮತ್ತು ಸಮ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಐಕಳಬಾವ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಯಾವುದೇ ವ್ಯಕ್ತಿ ಸಮಾಜದಲ್ಲಿ ಉತ್ತಮ ಕೆಲಸವನ್ನು ಮಾಡಿದರೂ ಅದಕ್ಕೆ ಪೂರಕ ಶಕ್ತಿ ಪತ್ರಕರ್ತರು, ರಾಜಕೀಯ ವ್ಯಕ್ತಿಗಳ ಒಲಿತು ಕೆಡುಕುಗಳನ್ನು ಸಮಾನವಾಗಿ ಸಮಾಜದ ಮುಂದಿರಿಸಿದರೆ ಮಾತ್ರ ರಾಜಕೀಯ ಕ್ಷೇತ್ರ ಪರಿಶುದ್ಧವಾಗಿರಲು ಸಾಧ್ಯ, ನಮ್ಮಂಥಹ ರಾಜಕಾರಣಿಗಳಿಗೆ ಪತ್ರಕರ್ತರ ಭಯ ಬಿಟ್ಟರೆ ಯಾರ ಭಯವೂ ನಮಗಿಲ್ಲ.. ಆ ನಿಟ್ಟಿನಲ್ಲಿ ದೇಶದ ಸರ್ವಾಂಗಿನ ಅಭಿವೃದ್ಧಿ ಪತ್ರಕರ್ತರೇ ಮೂಲ ಕಾರಣವೆಂದರು.

ಉದ್ಯಾವರ ಜಯಲಕ್ಷಿ ಸಿಲ್ಕ್ ಯೋಗೀಶ್ ಎಸ್ ಕೋಟ್ಯಾನ್ ಬಹುಮಾನಗಳನ್ನು ವಿತರಿಸಿದರು.ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಮೋದ್ ಕುಮಾರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಸಮಾರಂಭದಲ್ಲಿ ನಿವೃತ್ತ ಪೊಲೀಸ್  ಉಪನಿರೀಕ್ಷಕ ರಾಜಗೋಪಾಲ್, ಗೃಹರಕ್ಷಕದಳದ ಲಕ್ಷ್ಮೀನಾರಾಯಣ ರಾವ್, ಅಗ್ನಿಶಾಮಕ ದಳದ ಅಶ್ವಿನ್ ಸನಿಲ್, ಗಿನ್ನೆಸ್ ದಾಖಲೆಯ ಯೋಗಸಾಧಕಿ ತನುಶ್ರೀ ಪಿತ್ರೋಡಿ, ಕರಾಟೆ ಸಾಧಕಿ ಚೈತ್ರಾ ಎ.ಸಾಲ್ಯಾನ್ ಎರ್ಮಾಳು, ರುದ್ರಭೂಮಿ ನಿರ್ವಾಹಕ ಕಿಶೋರ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ಪ್ರಮೋದ್ ಸುವರ್ಣ ವಹಿಸಿದ್ದು, ಮುಖ್ಯ ಅಥಿತಿಗಳಾಗಿ ಜಿ.ಪಂ.ಸದಸ್ಯೆ ಗೀತಾಂಜಲಿ ಎಂ.ಸುವರ್ಣ, ಕಟಪಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ವಿನಯ ಬಲ್ಲಾಳ್, ಉಡುಪಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಭಾರತ್ ಕ್ಯಾನಿಂಗ್ ಕಂಪೆನಿಯ ಆಡಳಿತ ನಿರ್ದೇಶಕ ಶ್ರೀಧರ ಶೇಣವ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಸಾಯಿರಾಧ ಗ್ರೂಪ್ಸ್‍ನ ಮನೋಹರ್ ಶೆಟ್ಟಿ ಉಪಸ್ಥಿತರಿದ್ದರು.
ಫೈಲ್-ವಾಟ್ಸಾಪ್

Related posts

Leave a Reply

Your email address will not be published. Required fields are marked *