Header Ads
Breaking News

ಕಾಪು ಪುರಸಭೆಯ ನೀತಿಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕಾಪು ಬ್ಲಾಕ್ ಕಾಂಗೆಸ್ ಸಮಿತಿ ಇದರ ನೇತೃತ್ವದಲ್ಲಿ ಕಾಪು ನಗರ ಯೋಜನಾ ಪ್ರಾಧಿಕಾರ ಮತ್ತು ಪುರಸಭೆಯ ನೀತಿಯ ವಿರುದ್ಧ ಅಕ್ಟೋಬರ್ 15 ರಂದು ಬೆಳಿಗ್ಗೆ 10-30 ಕ್ಕೆ ಕಾಪು ಪುರಸಭೆಯ ಎದುರು ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.ಅವರು ಕಾಪು ಪ್ರೆಸ್ ಕ್ಲಬ್‍ನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಹಿಂದಿನ ಸರಕಾರದ ಅವಧಿಯಲ್ಲಿ ಮಂಜೂರಾಗಿರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಸಮಸ್ತ ಅಭಿವೃದ್ಧಿಗಾಗಿ ಮೀಸಲಿರುವ ಅನುದಾನವನ್ನು ಕಾರ್ಕಳ ಪುರಸಭೆಗೆ ವರ್ಗಾಯಿಸಿದ್ದು, ದಲಿತ ಧೋರಣಿಯ ವಿರುದ್ಧ ಮತ್ತು ಅನುಷ್ಠಾನ ಗೊಳಿಸಲು ಬಾಕಿ ಇರುವ ಕಾಮಗಾರಿಗಳು ಸ್ಥಗಿತ ಗೊಂಡಿರುವುದರಿಂದ ಕಾಪುವಿನ ಅಭಿವೃದ್ಧಿ ಸಮಗ್ರವಾಗಿ ಕುಂಠಿತ ಆಗಿದೆ. ಈ ಹಿಂದಿನ ಶಾಸಕರ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ವರ್ಗಾವಣೆ, ತಮ್ಮ ಆಡಳಿತಾವಧಿಯಲ್ಲಿ ಆದ ವೈಫಲ್ಯ ಮರೆ ಮಚಲು ಯತ್ನಿಸಲಾಗುತ್ತಿದೆ ಎಂದು ಸ್ಪಷ್ಠವಾಗಿ ಗೊತ್ತಾಗುತ್ತಿದೆ. ಕಾಪು ಪುರಸಭೆಯ ಜನ ವಿರೋಧಿಯಾಗಿ ನೀರಿನ ತೆರಿಗೆ ಮನೆ ತೆರಿಗೆ ವಾಣಿಜ್ಯ ತೆರಿಗೆ, ಮೆಸ್ಕಾಂ ಬಿಲ್ಲು ಸಹಿತ ಎಲ್ಲವನ್ನೂ ಹೆಚ್ಚಳ ಮಾಡಿದೆ. ಪುರಸಭೆಯ ಆಡಳಿತ ವೈಫಲ್ಯದ ವಿರುದ್ಧ ನಮ್ಮ ಪ್ರತಿಭಟನೆ ಆಗಿದೆ ಎಂದು ವಿನಯ್ ಕುಮಾರ್ ಸೊರಕೆ ಸ್ಪಷ್ಠಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾಪು ಕಾಂಗ್ರೆಸ್ಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಯುವಕಾಂಗ್ರೆಸ್ ಉಸ್ತುವಾರಿ ಅಖಿಲೇಶ್, ಪುರಸಭಾ ಸದಸ್ಯರಾದ ಮಾಲಿನಿ, ಸೌಮ್ಯ ಸಂಜೀವ, ಹರೀಶ್ ನಾಯಕ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *