Header Ads
Breaking News

ಕಾಪು ಬೀಚ್ ಬಳಿ ಮತ್ಸ್ಯ ಬೇಟೆ : ಮೀನುಗಾರರು ಮಾತ್ರವಲ್ಲದೆ ಮತ್ಸ್ಯ ಪ್ರೀಯರಿಗೆ ಸುಗ್ಗಿ

ಕಾಪು ಬೀಚ್ ಬಳಿ ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ಕೈರಂಪಣಿ ಫಂಡ್‍ನವರು ಬೀಸಿದ ಬಲೆಗೆ ಲಕ್ಷಾಂತರ ಸಂಖ್ಯೆಯ ಮೀನುಗಳು ಏಕಕಾಲದಲ್ಲಿ ಸಿಕ್ಕಿದ್ದು ಮೀನುಗಾರರು ಮಾತ್ರವಲ್ಲದೇ ಮತ್ಸ ಪ್ರಿಯರಲ್ಲೂ ಸಂತಸ ಮೂಡಿಸಿದೆ.

ಬೀಸಿದ ಬಲೆಗೆ ನಿರೀಕ್ಷೆಗೂ ಮೀರಿ, ವಿವಿಧ ಜಾತಿಯ ಮೀನುಗಳು ಬಿದ್ದಿದ್ದು ಮೀನು ತುಂಬಿದ ಬಲೆಯನ್ನು ದಡಕ್ಕೆ ಎಳೆಯಲು ಮೀನುಗಾರರು ದಿನವಿಡೀ ಪರದಾಡುವಂತಾಗಿದೆ. ಒಳ್ಳೆಯ ಜಾತಿಯ ಮೀನುಗಳನ್ನು ಮೀನುಗಾರರು ಸ್ಥಳದಲ್ಲೇ ವಿಂಗಡಿಸಿ ಮಾರಾಟಕ್ಕಾಗಿ ಬಂದರಿಗೆ ಸಾಗಿಸಲಾಗಿದ್ದು, ಲೋಡ್‍ಗಟ್ಟಲೆ ಸಣ್ಣ ಸಣ್ಣ ಮೀನುಗಳನ್ನು ಫಿಶ್ ಮಿಲ್‍ಗೆ ಸಾಗಿಸಲಾಗಿದೆ. ಉಳಿದಂತೆ ಜನರ ರುಚಿಯ ವಿವಿಧ ಜಾತಿಯ ಮೀನುಗಳನ್ನು ಸ್ಥಳದಲ್ಲೇ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ.ಸಮುದ್ರ ಪಾಲಾದ ಮತ್ತು ಬಲೆಯಿಂದ ಜಿಗಿದು ದಡ ಸೇರಿದ ಮೀನುಗಳನ್ನು ಹಿಡಿಯಲು ದಡಕ್ಕೆ ಎಳೆಯುವ ವೇಳೆ ಬಲೆಯಿಂದ ಹೊರಕ್ಕೆ ಬಿದ್ದ ಮೀನುಗಳನ್ನು ಹೆಕ್ಕಲು ಜನರು ತಾಮುಂದು ತಾಮುಂದು ಎಂಬಂತೆ ಬೀಚ್‍ನಲ್ಲಿ ಹೊಯ್ದಾಡಿದರು.

Related posts

Leave a Reply

Your email address will not be published. Required fields are marked *