Header Ads
Breaking News

ಕಾರ್ಕಳದಲ್ಲಿ ಅನಾಥ ವೃದ್ಧರೋರ್ವರಿಗೆ ಆಶ್ರಯ ಕಲ್ಪಿಸಿದ ಅನಾಥಾಶ್ರಮ

ಕಾರ್ಕಳದಲ್ಲಿ ರಿಕ್ಷಾ ಚಾಲಕರೊಬ್ಬರು ಅನಾಥವೃದ್ಧರೊಬ್ಬರನ್ನು ಸಾಂತ್ವಾನ ಕೇಂದ್ರಕ್ಕೆ ಕರೆದುಕೊಂಡು ಬಂದು ತಾತ್ಕಾಲಿಕ ಆಶ್ರಯ ನೀಡುವಂತೆ ವಿನಂತಿಸಿಕೊಂಡರು. ಇದಕ್ಕೆ ಸಾಂತ್ವಾನ ಕೇಂದ್ರದವರು ಒಪ್ಪಿಕೊಂಡಿಲ್ಲ ಬಳಿಕ ಗ್ರಾಮಾಂತರ ಠಾಣೆ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರ ಸಹಯೋಗದೊಂದಿಗೆ ಕಾರ್ಕಳದ ಸಮಾಜ ಸೇವಕಿ ಆಯಿಷಾ ರವರ ವೃದ್ಧಾಶ್ರಮಕ್ಕೆ ಸೇರಿಸಲು ಸಹಾಯ ಮಾಡಿದ ಘಟನೆ ನಡೆದಿದೆ.

ಕಾರ್ಕಳದಲ್ಲಿ ರಿಕ್ಷಾ ಚಾಲಕರೊಬ್ಬರು ಸುಮಾರು 70 ವರ್ಷದ ಅನಾಥ ವೃದ್ಧರನ್ನು ಕರೆದುಕೊಂಡಯ ಬಂದು ಸ್ವಾಂತನ ಮಹಿಳಾ ವಾಹಿನಿ ಕೇಂದ್ರದಲ್ಲಿ ತಾತ್ಕಾಲಿಕ ಆಶಯವನ್ನು ಕೇಳಿಕೊಂಡಾಗ ಒಕ್ಕೂಟ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತೆ ಕಾಂತಿ ಶೆಟ್ಟಿ ಯವರು ಉಡುಪಿ ವೃದ್ಧಾಶ್ರಮ ದವರಿಗೆ ಸಂಪರ್ಕಿಸಿದಾಗ ಕೋವಿಡ್ ಕಾರಣದಿಂದ ನಾವು ಯಾರನ್ನು ವೃದ್ರಾಶ್ರಮ ಸೇರಿಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದರು. ಮಹಿಳಾ ಮಂಡಳಿಗಳ ಅಧ್ಯಕ್ಷೆಯಾದ ಯಶೋಧಶೆಟ್ಟಿ, ರೋಟರಿಯನ್ಸ್ ಕ್ಲಬ್‍ನ ಅಧ್ಯಕ್ಷರಾದ ರಮಿತಾ ಶೈಲೇಂದ್ರ ರಾವ್ ಗ್ರಾಮಾಂತರ ಠಾಣೆ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಇವರ ಸಹಯೋಗದೊಂದಿಗೆ ಕಾರ್ಕಳದ ಸಮಾಜ ಸೇವಕಿ ಆಯಿಷಾ ರವರ ವೃದ್ಧಾಶ್ರಮಕ್ಕೆ ಸೇರಿಸಲು ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳಾ ಸಾಂತ್ವಾನ ಸಹಾಯವಾಣಿ ಕೇಂದ್ರದ ಕೌಟುಂಬಿಕ ಸುನಿತಾ ಸುಧಾಕರ್‍ಬವರು, ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರದೇ ಇದ್ದರೂ ನಾವು ಎಲ್ಲರ ಸಹಕಾರದಿಂದ ಈ ವೃದ್ಧರಿಗೆ ಸಮಾಜಸೇವಕಿ ಆಯಿಷಾ ರವರ ಅನಾಥಾಶ್ರಮಕ್ಕೆ ದಾಖಲು ಮಾಡಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *