Header Ads
Breaking News

ಕಾರ್ಕಳದಲ್ಲಿ ಆರ್‌ಎಸ್‌ಎಸ್ ನ ಹಿರಿಯ ಮುಖಂಡರುಗಳಿಗೆ ವಂದನಾ ಕಾರ್ಯಕ್ರಮ

ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಜನರು ಮಾನಸಿಕ, ಸಾಮಾಜಿಕ, ಜೀವನ ಪದ್ಧತಿಗಳ ಮೂಲಕ ಮುಂದಿನ ಸ್ಥಿತಿಗತಿ ಚಿಂತಿಸುವುದರೊಂದಿಗೆ ಡಾ. ಹೆಗಡೆವಾರ್ ರಾಷ್ಟ್ರೀಯ ಸ್ವಯಂ ಸೇವಾ ಸಂಘವನ್ನು ಹುಟ್ಟಹಾಕಿದರು ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಸ್.ಶಂಕರ್‌ಮೂರ್ತಿ ಹೇಳಿದರು.

ಅವರು ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ಸಂಘ ಪರಿವಾರದ ಹಿರಿಯ ಮುಖಂಡರಾದ ಬೋಳ ಪ್ರಭಾಕರ ಕಾಮತ್ ಹಾಗೂ ಎಂ.ಕೆ ವಿಜಯಕುಮಾರ್ ಅವರಿಗೆ ಧ್ಯೇಯ ವಂದನಾ ಕಾರ್ಯಕ್ರಮದಲ್ಲಿ ವಂದನಾ ನುಡಿ ಸಲ್ಲಿಸಿ ಅವರು ಮಾತನಾಡಿದರು.

1948ರ ಮಹಾತ್ಮಗಾಂಧಿಯವರ ಹತ್ಯೆಯ ಆರೋಪವನ್ನು ಆರ್‌ಎಸ್‌ಎಸ್ ಮೇಲೆ ಹೊರಿಸಿದಾಗ ಆ ಸಂಘಟನೆಯ ಪರ ಮಾತನಾಡುವ ಧ್ವನಿಗಳೇ ದೇಶದಲ್ಲಿ ಕ್ಷೀಣಿಸಿಕೊಂಡಿತು. ಸಂಘದ ಧ್ಯೇಯ ಉದ್ದೇಶವನ್ನು ರಾಜಕೀಯ ವೇದಿಕೆಯ ಮೇಲೆ ಹೇಳದೇ ಹೋದರೆ ದೇಶ ಸ್ಥಿತಿಗತಿಯ ಮೇಲೆ ಕರಿಛಾಯೆ ಮೂಡಲಿದೆ ಎಂಬುದನ್ನು ಮನಗಂಡು ಆರ್‌ಎಸ್‌ಎಸ್ ಮುಖಂಡ ಹೆಗಡೆವಾರ್ ಜನಸಂಘವೆಂಬ ರಾಜಕೀಯ ಪಕ್ಷವನ್ನು ಹುಟ್ಟುಹಾಕಿದವರಲ್ಲಿ ಪ್ರಮುಖರಾಗಿದ್ದರು ಎಂದು ಹೇಳಿದ್ರು.

ಶಾಸಕ ಹಾಗೂ ವಿಧಾನ ಸಭಾ ಪ್ರತಿಪಕ್ಷ ಮುಖಂಡ ಸುನೀಲ್‌ಕುಮಾರ್ ಇದೇ ಸಂದರ್ಭದಲ್ಲಿ ಅಶಯ ಬಾಷಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ರಾಷ್ಟ್ರೀಯ ವಿಚಾರಧಾರೆ ಹಾಗೂ ಧ್ಯೇಯೋದ್ದೇಶ ಇಟ್ಟು ಕೊಂಡು ಕೆಲಸ ಮಾಡಿದ ಬೊಳ ಪ್ರಭಾಕರ ಕಾಮತ್ ಹಾಗೂ ಎಂ.ಕೆ.ವಿಜಯಕುಮಾರ್ ಅವರಿಗೆ ಈ ಸಮಾರಂಭ ಏರ್ಪಡಿಸಲಾಯಿತು. ಅವರು ಹಳ್ಳಿ ಹಳ್ಳಿಗಳಲ್ಲಿ ಕೆಲಮಾಡಿದವರು 80-75 ನೆಪವಿಟ್ಟು ವಿಚಾರವಾಗಿ ಸಮಾರಂಭ, ಸನ್ಮಾನ ಅವರಿಗೋಸ್ಕರವಲ್ಲ. ನಮ್ಮ ವಿಚಾರ ಧಾರೆ ಮತ್ತೆ ಮತ್ತೆ ಹೇಳುವ ಹಾಗೂ ಮುಂದಿನ ಜನಾಂಗಕ್ಕೆ ಗೊತ್ತು ಪಡಿಸುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲೇ ಬೇಕಾಗುತ್ತದೆ ಎಂದ್ರು..

ಇದೇ ಸಂದರ್ಭ ವಿಜಯಲಕ್ಷ್ಮೀ ಕಿಣಿ ವಂದೆಮಾತರಂ ಹಾಡಿದರು. ಅಭಿನಂದನಾ ಗೀತೆಯ ಬಳಿಕ ಶಾಸಕ ವಿ.ಸುನೀಲ್‌ಕುಮಾರ್ ಸಾರಥ್ಯದಲ್ಲಿ ಬೋಳ ಪ್ರಭಾಕರ ಕಾಮತ್ ಹಾಗೂ ವಕೀಲ ಎಂ.ಕೆ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಖಿಲ ಭಾರತೀಯ ಕುಟುಂಬ ಪ್ರಭೋಧಿನಿಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ವಂದನಾ ನುಡಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವಕೀಲ ಮಣಿರಾಜ್ ಶೆಟ್ಟಿ, ಸಂಗೀತಾ ಕುಲಾಲ್, ಉದ್ಯಮಿ ಅನಂತಕೃಷ್ಣ ಶೆಣೈ ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *