Header Ads
Breaking News

ಕಾರ್ಕಳದಲ್ಲಿ ಒಳಚರಂಡಿ ಕಾಮಗಾರಿಗೆ ಚಾಲನೆ; ಕಾಮಗಾರಿಗೆ 13 ಕೋಟಿ ರೂ. ಅನುದಾನ ಬಿಡುಗಡೆ

ಕಾರ್ಕಳ ನಗರದ ಒಳಚರಂಡಿ ಕಾಮಗಾರಿಗೆ ಚಾಲನೆ ದೊರಕಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿಗೆ 13 ಕೋಟಿ ರೂಪಾಯಿ ಸರಕಾರದಿಂದ ಅನುದಾನ ಬಿಡುಗಡೆಗೊಂಡಿದೆ. ಮೂರು ಹಂತಗಳಲ್ಲಿ ಕಾಮಗಾರಿಕೆ ನಡೆಯುತ್ತಿದೆ. 4 ತಿಂಗಳ ಒಳಗಾಗಿ ಕಾಮಗಾರಿಕೆ ಮುಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿ ಕೆಯನ್ನು ಶುಭಲಕ್ಷ್ಮಿ ಕನ್ಸ್ಟ್ರಕ್ಷನ್ ನ ನಂದಕುಮಾರ್ ಗುತ್ತಿಗೆ ಪಡೆದಿರುತ್ತಾರೆ ಪ್ರಥಮ ಹಂತದ ಕಾಮಗಾರಿಕೆ ಉಷಾ ಜುವೆಲ್ಲರಿ ಬಳಿಯಿಂದ ಮೂರು ಮಾರ್ಗದ ವರೆಗೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮೂರು ಮಾರ್ಗ ಮತ್ತು ಉಷಾ ಜುವೆಲ್ಲರಿ ಸಮೀಪ ವಾಹನ ಸಂಚಾರ ನಿಷೇಧಿಸಿ ಮುಖ್ಯರಸ್ತೆಗೆ ತಡೆ ಅಳವಡಿಸಲಾಗಿದೆ..

Related posts

Leave a Reply

Your email address will not be published. Required fields are marked *