Header Ads
Breaking News

ಕಾರ್ಕಳದಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ಕಾಳಿಂಗ ಸರ್ಪ

ಕಾರ್ಕಳ : ಕಾರ್ಕಳದ ಅಜೆಕಾರು ಸಮೀಪದ ಕಾಡುಹೊಳೆ ಎಂಬಲ್ಲಿ ಕಾಣಿಸಿಕೊಂಡ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗತಜ್ಞ ಅಜಯ್ ಗಿರಿ ಎಂಬವರು ರಕ್ಷಿಸಿ ಆಗುಂಬೆ ರಕ್ಷಿತಾರಣ್ಯಕ್ಕೆ ಬಿಟ್ಟು ಬಿಡಲಾಯಿತು. ಈ ಕಾಳಿಂಗ ಸರ್ಪ ಕಳೆದ ಹಲವು ದಿನಗಳಿಂದ ಸ್ಥಳಿಯರನ್ನು ಭಯಬೀತಗೊಳಿಸಿತ್ತು. ಉರಗತಜ್ಞ ಅಜಯ್ ಗಿರಿ ಎಂಬವರು ಪೈಪ್ ಮತ್ತು ಸ್ಟಿಕ್ ಸಹಾಯದಿಂದ ಹಾವು ಹಿಡಿದರು. ಬಳಿಕ ಆಗುಂಬೆ ರಕ್ಷಿತಾರಣ್ಯದ ಕಾಡಿನಲ್ಲಿ ಹಾವನ್ನು ಬಿಡಲಾಯಿತು. ಕಾಳಿಂಗ ಸರ್ಪ ಹಿಡಿದ ಬಳಿಕ ಸ್ಥಳೀಯರು ನಿಟ್ಟುಸಿರು ಬಿಟ್ಟಂತಾಗಿದೆ.

Related posts

Leave a Reply

Your email address will not be published. Required fields are marked *