Header Ads
Breaking News

ಕಾರ್ಕಳದಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

ಕಾರ್ಕಳ: ನಾಗರಿಕತ್ವ ಹಾಗೂ ಪೌರತ್ವವನ್ನು ಧರ್ಮದ ಆಧಾರದಲ್ಲಿ ನೀಡದೇ ಧಮನಕ್ಕೊಳಗಾಗಿ ಬಂದವರಿಗೆ ನೀಡಬೇಕು. ಒಂದು ಸಮುದಾಯಕ್ಕೆ ಧರ್ಮದ ಕಾರಣದಿಂದ ಪೌರತ್ವ ಹಾಗೂ ನಾಗರಿಕತ್ವ ನಿರಾಕರಿಸುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತಾಗುತ್ತದೆ ಎಂದು ಪ್ರಗತಿಪರ ಚಿಂತಕ ಹಾಗೂ ಲೇಖಕ ಶಿವಸುಂದರ್ ಹೇಳಿದರು.

ಕಾರ್ಕಳ ಬಂಡೀಮಠ ಬಸ್ ನಿಲ್ದಾಣ ಪರಿಸರದಲ್ಲಿ ಎನ್‍ಆರ್‍ಸಿ, ಸಿಎಎ ಮತ್ತು ಎನ್‍ಪಿಆರ್ ವಿರೋಧಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಆಯೋಜಿಸಿದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಭಾರತೀಯ ನಾಗರಿಕ ಕಾಯ್ದೆಯಲ್ಲಿ ಸ್ಪಷ್ಟಪಡಿಸಿದಂತೆ ಈ ದೇಶ ಮೇಲಿನ ಸಂವಿಧಾನ ಮೇಲೆ ನಂಬಿಕೆ ಇಟ್ಟು ಬಂದಂತಹ ನಾಗರಿಕರು ದೇಶದ ನಾಗರಿಕತ್ವ ನೀಡಬಹುದಾಗಿದೆ. ದೇಶದಲ್ಲಿ ಇದುವರೆಗೆ ಮೂರು ತಿದ್ದುಪಡಿಯಾಗಿದೆ. ಅದರಲ್ಲಿ ಕೊನೆಯ ತಿದ್ದುಪಡಿ ಧರ್ಮದ ಆಧಾರ ಮೇಲೆ ನಡೆದಿದೆ ಎಂದಿದೆ.
ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ, ಜೋಕಟ್ಟೆ ಆಶ್ರಫ್, ಉಡುಪಿ ಪಾಂತ್ಯದ ಧರ್ಮಗರುರು ರೆ.ಫಾ.ವಿಲಿಯಂ, ಮಾರ್ಟಿಸ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಉಡುಪಿ ಜಿಲ್ಲೆಯ ಪ್ರದಾನ ಸಂಚಾಲಕ ಸುಂದರ ಮಾಸ್ಟರ್, ಅಬೂ ಸಫಿಯಾನ್, ವಕೀಲ ಶೇಖರ್ ಮಡಿವಾಳ, ಬಿಪಿನ್ ಚಂದ್ರಪಾಲ್ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *