Header Ads
Header Ads
Header Ads
Header Ads
Header Ads
Header Ads
Breaking News

ಕಾರ್ಕಳದಲ್ಲಿ ಮಳೆಯಿಂದ ಮನೆ ಕಳೆದುಕೊಂಡವರಿಗೆ ಚೆಕ್ ವಿತರಣೆ

ಕಾರ್ಕಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸರಕಾರಿ ಜಾಗದಲ್ಲಿ ಮನೆಕಟ್ಟಿ ಕುಳಿತವರಿಗೆ 94ಸಿ ಹಾಗೂ 94ಸಿಸಿ ಯವರಿಗೆ ಹಕ್ಕುಪತ್ರ ವಿತರಣೆ ಹಾಗೂ 15 ದಿನಗಳ ಹಿಂದೆ ಬೀಸಿದ ಸುಂಟರಗಾಳಿ ಮತ್ತು ಮನೆಮಠ ಕಳೆದುಕೊಂಡ 62 ಮಂದಿಗೆ 5 ಲಕ್ಷದ 15 ಸಾವಿರ ರೂಪಾಯಿಯ ಚೆಕ್ಕನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯತಿ ಅಧ್ಯಕ್ಷೆ ನಿಧಿ ಮಾಲಿನಿ ಶೆಟ್ಟಿ ಅವರು ನಮ್ಮ ಶಾಸಕರು ಹಾಗೂ ಜನ ಪ್ರತಿನಿಧಿಗಳು ಅಧಿಕಾರಿಗಳು ತಕ್ಷಣ ಸಂತ್ರಸ್ತರಿಗೆ ಸ್ಪಂದಿಸಿ ಆದಷ್ಟು ಬೇಗ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿದರು. ನಂತರ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಅವರು ವರ್ಷಗಳಿಂದ ಜಾಗದಲ್ಲಿ ಮನೆ ಕಟ್ಟಿ ಕುಳಿತವರು ಸರಕಾರದ ಸಿಗುವಂತ ಸವಲತ್ತುಗಳಿಂದ ವಂಚಿತರಾಗಿದ್ದರು. ಈ ಸಂದರ್ಭದಲ್ಲಿ ಹಕ್ಕು ಪತ್ರ ಪಡೆದುಕೊಂಡವರು ಸರಕಾರದಿಂದ ಸಿಗುವ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು. ಉತ್ತರ ಕನ್ನಡದಲ್ಲಿ ಉಂಟಾದ ಅನಾಹುತಗಳ ಎದುರು ನಮ್ಮ ಜಿಲ್ಲೆಯ ಆದ ಅನಾಹುತ ಏನು ಅಲ,್ಲ ಆದರೂ ಸರಕಾರ ತಕ್ಷಣ ನಮ್ಮ ತಾಲೂಕಿಗೆ ಆದಷ್ಟು ಬೇಗ ಪರಿಹಾರವನ್ನು ಒದಗಿಸಿದೆ ಎಂದು ಹೇಳಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ, ಉದಯ ಕೋಟ್ಯಾನ್, ರಶ್ಮಿ, ಹರೀಶ್ ನಾಯಕ್, ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *