Header Ads
Breaking News

ಕಾರ್ಕಳದ ಅಗ್ನಿಲಾ ಫ್ರೆಂಡ್ಸ್ ಕ್ರಿಕೆಟರ್‍ಸ್‌ನ ವಾರ್ಷಿಕೋತ್ಸವ

ಕಾರ್ಕಳದಲ್ಲಿರುವ ಅಗ್ನಿಲಾ ಫ್ರೆಂಡ್ಸ್ ಕ್ರಿಕೆಟರ್‍ಸ್‌ನ ವಾರ್ಷಿಕೋತ್ಸವ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್ಗನ್ ಡೊನೇಶನ್ ಇಂಡಿಯಾ ಪೌಂಡೇಶನ್‌ನ ಚೇರ್‌ಮೆನ್ ಮತ್ತು ಮೂಡುಬಿದರೆಯ ಪಂಡಿತ್ ಹೆಲ್ತ್ ರೆಸಾರ್ಟ್ ಮತ್ತು ಸ್ಪಾದ ಪ್ರವರ್ತಕರಾದ ಎಲ್ ಗೋಯಲ್ ಅವರು ಆಗಮಿಸಿದರು. ಬಳಿಕ ಮಾತನಾಡಿದ ಅವರು, ಅಗ್ನಿಲಾ ಫ್ರೆಂಡ್ಸ್ ಕ್ರಿಕೆಟರ್‍ಸ್‌ನ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಸಾಮಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಮುನ್ನಡೆಯಲಿ ಎಂದು ಹಾರೈಸಿದರು.

ಇದೇ ವೇಳೆ ಸಮಾರಂಭದಲ್ಲಿ ಮೂಡುಬಿದರೆ ಜೈನ ಮಠದ ಪರಮಪೂಜ್ಯ ಭಾರತ್ ಭೂಷಣ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕಿರ್ತಿ ಪಂಡಿತಾಚರ್ಯವರ್ಯ ಮಹಾಸ್ವಾಮೀಜಿ ಅವರನ್ನು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ರತ್ನಾಕರ್ ಪೂಜಾರಿ, ನರಸಿಂಹ ಭಟ್, ಉಮೇಶ್ ರಾವ್, ಚಂದ್ರಶೇಖರ್ ಕುಲಾಲ್, ಪ್ರಸಾದ್ ಪೂಜಾರಿ, ಹರೀಶ್ವಂದ್ರ ನಾಯಕ್, ಪದ್ಮಾವತಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *