Header Ads
Breaking News

ಕಾರ್ಕಳದ ಪುಲ್ಕೇರಿಯಲ್ಲಿ ವೃತ್ತ ನಿರ್ಮಾಣಕ್ಕೆ ಆಗ್ರಹ

ಕಾರ್ಕಳ : ಮಂಗಳೂರು-ಕುದುರೆಮುಖ ಕಡೆಯಿಂದ ತೆರಳುವ ಪುಲ್ಕೇರಿ ಎಂಬಲ್ಲಿ ಹಲವು ವರ್ಷಗಳಿಂದ ಸಣ್ಣಾದಾದ ವೃತ್ತವೊಂದಿತ್ತು. ರಸ್ತೆಯನ್ನು ಅಗಲೀಕರಣ ಮಾಡುವ ಉದ್ದೇಶದಿಂದ ವೃತ್ತ ಮತ್ತು ಹೈಮಾಸ್ಕ್ ದೀಪ ಹಾಗೂ ಮಾರ್ಗಸೂಚಿಯನ್ನು ತೆಗೆದು ಹಾಕಲಾಗಿತ್ತು. ವೃತ್ತ ನಿರ್ಮಿಸಲೆಂದು ಕೆಂಪು ಕಲ್ಲುಗಳನ್ನು ತಂದು ಹಾಕಲಾಗಿದ್ದು ವೃತ್ತ ನಿರ್ಮಾಣಗೊಳ್ಳಲೇ ಇಲ್ಲ. ಇದಕ್ಕೆ ಸಂಬಂಧಪಟ್ಟರು ಕೂಡಲೇ ವೃತ್ತ ನಿರ್ಮಿಸಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ ಹಲವಾರು ವರ್ಷಗಳ ಹಿಂದೆ ರಸ್ತೆಯನ್ನು ಅಗಲೀಕರಣ ಮಾಡಲು ಇಲಾಖೆ ಮುಂದಾಗಿತ್ತು. ಅದಕ್ಕಾಗಿಯೇ ವೃತ್ತ, ಹೈಮಾಸ್ಕ್ ದೀಪ ಹಾಗೂ ಮಾರ್ಗಸೂಚಿಯನ್ನು ಕಾಮಗಾರಿಯ ವೇಳೆ ತೆಗೆದು ಹಾಕಲಾಗಿತ್ತು. ಆದರೆ ಇದೀಗ ಕಾಮಗಾರಿ ನಡೆದು ಅದೇಷ್ಟೋ ವರ್ಷಗಳು ಕಳೆದಿದೆ. ಇನ್ನೂ ಕೂಡ ವೃತ್ತ ನಿರ್ಮಾಣಗೊಂಡಿಲ್ಲ. ಹೈಮಾಸ್ಕ್ ದೀಪ ಅಳವಡಿಸಿಲ್ಲ, ಮಾತ್ರವಲ್ಲದೆ ಮಾರ್ಗಸೂಚಿಯ ನಾಮಫಲಕವೂ ಇಲ್ಲವಾಗಿದೆ. ವೃತ್ತ ನಿರ್ಮಿಸಲೆಂದು ಕಲ್ಲು, ಜಲ್ಲಿ ಕಲ್ಲುಗಳು ರಸ್ತೆಯ ಮಧ್ಯಕ್ಕೆ ಬಂದು ಅಪಘಾತಗಳು ಸಂಭವಿಸುತ್ತಿದೆ. ಈ ಬಗ್ಗೆ ಸ್ಥಳೀಯರು, ಪುರಸಭೆ, ಲೋಕೋಪಯೋಗಿ ಇಲಾಖೆ ಹಾಗೂ ಶಾಸಕರ ಗಮನಕ್ಕೂ ತಂದರೂ ಸ್ಪಂದಿಸಿಲ್ಲ. ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
ಕರೆಮಾಡಿ. 9916156425
ಸುಂದರ. P. W. ಆ. ಇಂಜಿನಿಯ್ ರ್. 9686929551.ಸಂಪತ್ ಲೋಕಲ್.

Related posts

Leave a Reply

Your email address will not be published. Required fields are marked *