Header Ads
Header Ads
Breaking News

ಕಾರ್ಕಳದ ಬಂಡಿಮಠ ಬಸ್ ನಿಲ್ದಾಣದ ಶೌಚಾಲಯದಲ್ಲಿ ಸಾರ್ವಜನಿಕರ ಪರದಾಟ

ಒಂದು ಕಡೆ ಸಾರ್ವಜನಿಕ ಶೌಚಾಲಯದ ಪಕ್ಕದಲ್ಲಿರೋ ಮದ್ಯ ಬಾಟಲಿಗಳು, ಇನ್ನೊಂದು ಕಡೆ ಮುರಿದು ಬಿದ್ದಿರೋ ಶೌಚಾಲಯದ ಬಾಗಿಲು, ಮತ್ತೊಂದು ಕಡೆ ಒಡೆದು ಹೋಗಿರುವ ಬೇಝಿನ್‌ಗಳು.. ಈ ದೃಶ್ಯ ಕಂಡು ಬಂದಿದ್ದು ಕಾರ್ಕಳದ ಬಂಡಿಮಠ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದಲ್ಲಿ,.. ಹೌದು.. 2012ರಲ್ಲಿ ಕಾರ್ಕಳದ ಬಸ್ ನಿಲ್ದಾಣ ಸ್ಥಳಾಂತರಗೊಂಡ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸುಮಾರು ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ಹಾಗೂ ಸ್ನಾನ ಗೃಹವನ್ನು ಪುರಸಭೆಯವರು ನಿರ್ಮಾಣ ಮಾಡಿದ್ರು. ಆದ್ರೆ ಇರೀಗ ಶೌಚಾಲಯ ದುರ್ನಾಥ ಬೀರ್‍ತಾ ಇದೆ. ಇ

ನ್ನು ಆರು ತಿಂಗಳ ಹಿಂದೆ ಪುರಸಭೆ ವತಿಯಿಂದಎರಡು ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಆದರೆ ಕೀಲಿ ಕೈಖಾಸಗಿಯವರ ಕೈಯಲ್ಲಿದೆ. ಬಂಡೀಮಠ ಬಸ್ ನಿಲ್ದಾಣದಲ್ಲಿ ಹಲವಾರು ಅಂಗಡಿಗಳಿವೆ ಅನೇಕ ಸ್ತ್ರೀಯರು ದುಡಿಯುತ್ತಿದ್ದಾರೆ. ಅವರಿಗೆ ಶೌಚಾಲಯದ ಅಗತ್ಯವಿದ್ದಾಗ ಪಕ್ಕದಲ್ಲಿರುವ ಮನೆಗಳಿಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ಶೌಚಾಲಯವನ್ನು ಖಾಸಗಿಯವರಿಗೆ ಕೊಟ್ಟಿದ್ದರೆ ಶೌಚಾಲಯ ಉತ್ತಮ ಸ್ಥಿತಿಯಲ್ಲಿದ್ದು ಪುರಸಭೆಗೆ ಆದಾಯವು ಬರುತ್ತಿತ್ತು ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.

Related posts

Leave a Reply

Your email address will not be published. Required fields are marked *