Header Ads
Breaking News

ಕಾರ್ಕಳದ ವೈನ್ ಶಾಪ್‍ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕ್ಯೂ

ಲಾಕ್‍ಡೌನ್ ಹಿನ್ನೆಲೆ ಕಂಗಾಲಾಗಿದ್ದ ಕಾರ್ಕಳದ ಕುಡುಕರಿಗೆ ಬೆಳಿಗ್ಗಿನಿಂದಲೇ ಹಬ್ಬದ ದಿನವಾಗಿತ್ತು. ಸುಮಾರು 40 ದಿನಗಳಿಂದ ಮಧ್ಯ ಸಿಗದೆ ಕಂಗಾಲಾಗಿದ್ದ ಮದ್ಯಪ್ರಿಯರು ಇಂದು ಬೆಳಗಿನಿಂದಲೇ ಕಾರ್ಕಳದ ಮದ್ಯದಂಗಡಿಗಳ ಮುಂದೆ ಪಲಾರ್ಂಗ ಉದ್ದದ ಸರತಿಸಾಲಿನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ, ನಿಂತಿರುವ ದೃಶ್ಯ ಕಾರ್ಕಳದ ವೈನ್‍ಶಾಪ್‍ಗಳ ಮುಂದೆ ಕಂಡುಬಂತು. ಇಷ್ಟು ದಿನಗಳ ಕಾಲ ರೇಷನ್ ಅಂಗಡಿ ಮುಂದೆ ಆಗಲಿ, ಹಾಲಿನ ಅಂಗಡಿ ಮುಂದೆ ಆಗಲಿ, ಔಷಧಿ ಅಂಗಡಿಯ ಮುಂದೆ ಆಗಲಿ, ಇಷ್ಟು ದೊಡ್ಡ ಸರತಿ ಸಾಲನ್ನು ನಾವು ಕಂಡಿಲ್ಲವೆಂದು ಪೊಲೀಸ್ ರು ಹೇಳಿಕೊಳ್ಳುತ್ತಿದ್ದರು, ಇನ್ನು ಮಧ್ಯಾಹ್ನದ ನಂತರ ಮಧ್ಯದ ಅಂತರ ಎಲ್ಲಿಯವರೆಗೆ ತಲುಪುತ್ತದೆ ಎಂದು ಕಾದು ನೋಡಬೇಕು.

Related posts

Leave a Reply

Your email address will not be published. Required fields are marked *