
ಕಾರ್ಕಳದ ಅನಂತಪದ್ಮನಾಭ ದೇವಸ್ಥಾನದಲ್ಲಿ ಜನವರಿ 25ರಿಂದ ಜನವರಿ 31ರ ವರೆಗೆ ಹರಿಕಥೆ ಸಪ್ತಾಹ ನಡೆಯಲಿದೆ ಎಂದು ಹರಿ ಕಥಾ ಸಪ್ತಾಹದ ಸಂಚಾಲಕರಾದ ವೈ. ಅನಂತಪದ್ಮನಾಭ ಭಟ್ ತಿಳಿಸಿದರು.
ಅವರು ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಕಾರ್ಕಳ ಅನಂತಪದ್ಮನಾಭ ದೇವಸ್ಥಾನದಲ್ಲಿ ನಡೆಯಲಿದೆ. ಜನವರಿ 31ರವರೆಗೆ ಜರುಗಲಿರುವ ಹರಿಕಥೆ ಸಪ್ತಾಹದಲ್ಲಿ ಜಿಲ್ಲೆಯ ಪ್ರಸಿದ್ಧ ಹರಿದಾಸರು ಹರಿಕಥೆ ಸಪ್ತಾಹವನ್ನು ನಡೆಸಲಿದ್ದಾರೆ. ಶ್ರೀ ಅನಂತಪದ್ಮನಾಭ ದೇವಸ್ಥಾನ ದ ಭಜಕ ವೃಂದ ಮತ್ತು ಹರಿಕಥೆ ಸಪ್ತಾಹ ಸಮಿತಿ ಕಾರ್ಕಳ ಇವರ ಸಹಯೋಗದೊಂದಿಗೆ ಕಳೆದ ಐದು ವರ್ಷಗಳಿಂದ ಸಪ್ತಾಹವನ್ನು ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಉಮೇಶ ಹೆಬ್ಬೆರ, ಹಾಗೂ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.