Header Ads
Header Ads
Breaking News

ಕಾರ್ಕಳ ಅನಂತಶಯನದ ಸ್ವಾತಂತ್ರ್ಯ ಕಟ್ಟೆಯಲ್ಲಿ ಕನ್ನಡ ರಾಜ್ಯೋತ್ಸವ

64ನೇ ಕನ್ನಡ ರಾಜ್ಯೋತ್ಸವಕ್ಕೆ ಕಾರ್ಕಳ ಅನಂತಶಯನದ ಸ್ವಾತಂತ್ರ್ಯ ಕಟ್ಟೆಯಲ್ಲಿ ಕಾರ್ಕಳ ದಂಡಾಧಿಕಾರಿಯಾದ ಪುರಂದರ ಹೆಗಡೆ ಹಾಗೂ ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಿ ಆರತಿ ಎತ್ತಿ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಕನ್ನಡಾಂಬೆ ರಥವನ್ನು ಮೆರವಣಿಗೆ ಮೂಲಕ ಗಾಂಧಿ ಮೈದಾನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ರಾಷ್ಟ್ರ ಧ್ವಜವನ್ನು ಅರಳಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಬಹಳ ಪುರಾತನ ಕಾಲದಿಂದಲೂ ಕರ್ನಾಟಕ ಸಂಪತ್ತಿನಿಂದ ಹಾಗೂ ವಿದ್ಯೆಯಿಂದ ಕೂಡಿದ ರಾಜ್ಯವಾಗಿತ್ತು. ನಮ್ಮ ರಾಜ್ಯ ಹೆಸರುವಾಸಿಯಾದ ಕವಿಗಳ ನಾಡಾಗಿತ್ತು. ನಾವು ಕನ್ನಡವನ್ನು ಉಳಿಸಬೇಕು. ನಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ನಿರ್ವಹಣಾ ಅಧಿಕಾರಿ ಡಾ. ಮೇಜರ್ ಹರ್ಷ. ಪೋಲಿಸ್ ಸಹಾಯಕ ಅಧೀಕ್ಷಕರಾದ ಶ್ರೀ ಕೃಷ್ಣಕಾಂತ. ಹಾಗೂ ಪುರಸಭಾಧಿಕಾರಿ ರೇಖಾಶೆಟ್ಟಿ ಜಿಲ್ಲಾ ಪಂಚಾಯತ್ ಉದಯ ಕೋಟ್ಯಾನ್ ಜಯವರ್ಮ ಜೈನ್ ಮುಂತಾದವರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *