
ಕಾರ್ಕಳ ಪುರಸಭೆಯ ವ್ಯಾಪ್ತಿಯಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ನೆಲಭರ್ತಿ ಜಾಗದಲ್ಲಿ ತುಂಬಿಸದೇ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕಾರ್ಕಳದ ಜನತೆಯ ಸಹಕಾರವನ್ನು ಪುರಸಭೆಯ ಅಧಿಕಾರಿ ರೇಖಾ ಜೆ ಶೆಟ್ಟಿಯವರು ಮನವಿ ಮಾಡಿಕೊಂಡಿದ್ದಾರೆ
ತಮ್ಮ ಮನೆ ವಾಣಿಜ್ಯ ಹೋಟೆಲು ಮಾಂಸದಂಗಡಿ ತರಕಾರಿ ಅಂಗಡಿ ಮತ್ತು ವಾಸ್ತವ್ಯದ ಮನೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ, ಕಸ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ಹಸಿ ಕಸವನ್ನು ಪ್ರತಿ ಎರಡು ದಿನ ದಿನಕ್ಕೊಮ್ಮೆ ಪುರಸಭಾ ವಾಹನಕ್ಕೆ ನೀಡುವುದು, ಒಣಕಸಗಳಾದ ಹಾಲಿನ ಕವರ್ ಕಾಗದ ಪ್ಲಾಸ್ಟಿಕ್ ಬಾಟಲಿ, ಕಬ್ಬಿಣ ಹಾಗೂ ಇತರ ಮಣ್ಣಿನಲ್ಲಿ ಕೊಳೆಯುವ ವಸ್ತುಗಳನ್ನು ಸ್ವಚ್ಛಗೊಳಿಸಿ ಪ್ರತ್ಯೇಕವಾಗಿ ಸಂಗ್ರಹಿಸಿ ಇಟ್ಟುಕೊಂಡು ಪ್ರತಿ ಶುಕ್ರವಾರ ವಾಹನಕ್ಕೆ ನೀಡುವುದು ತಾವು ನೀಡಿದ ಹಸಿ ಕಸವನ್ನು ಎರೆಹುಳ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ. ಪ್ರತಿನಿತ್ಯ ಹಸಿ ಕಸ ಮತ್ತು ಒಣ ಕಸವನ್ನು ಒಟ್ಟಿಗೆ ನೀಡಿ ನೆಲಭರ್ತಿ ಜಾಗದಲ್ಲಿ ತುಂಬಿರುವುದರಿಂದ ಈಗಾಗಲೇ ಪರಿಸರ ಮಾಲಿನ್ಯವಾಗುತ್ತದೆ ಹಾಗೂ ನೆಲಭರ್ತಿ ಜಾಗ ಕೂಡ ಪೂರ್ತಿ ಪ್ಲಾಸ್ಟಿಕ್ ಮಾಯವಾಗಲಿದೆ. ನಮ್ಮಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ ನೆಲಭರ್ತಿ ಜಾಗದಲ್ಲಿ ತುಂಬಿಸದೇ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ತಮ್ಮೆಲ್ಲರ ಸಹಕಾರವನ್ನು ಕೋರಲಾಗಿದೆ ಎಂದು ಕಾರ್ಕಳ ಪುರಸಭೆ ಅಧಿಕಾರಿ ರೇಖಾ ಜೆ ಶೆಟ್ಟಿಯವರು ಮಾಧ್ಯಮದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.